ಪಂಜಾಬ್: ಗಡಿ ಪ್ರದೇಶದಲ್ಲಿ ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ ಭಾರತಕ್ಕೆ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುವ ಪಾಕಿಸ್ತಾನದ ಮತ್ತೊಂದು ಪ್ರಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ-ಪಾಕಿಸ್ತಾನ ಗಡಿಯಲ್ಲಿರುವ ತಾರ್ನ್ ತರಣ್ ಜಿಲ್ಲೆಯ ಕಾಲಿಯಾ ಗ್ರಾಮದಲ್ಲಿ ಶನಿವಾರ ತಡರಾತ್ರಿ ಡ್ರೋನ್ ಚಲನವಲನ ಪತ್ತೆಯಾದ ನಂತರ ಬಿಎಸ್ಎಫ್ ಡ್ರೋನ್ ಮೇಲೆ 7 ಸುತ್ತು ಗುಂಡು ಹಾರಿಸಿದೆ.
ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ತಿಂಗಳಲ್ಲಿ ಡ್ರೋನ್ ಶಸ್ತ್ರಾಸ್ತ್ರ ಬೀಳಿಸುವ ಪ್ರಯತ್ನವನ್ನು ಬಿಎಸ್ಎಫ್ ತಡೆಗಟ್ಟಿದ ಎರಡನೇ ಪ್ರಕರಣ ಇದಾಗಿದೆ.
ಜನವರಿ 3 ರಂದು ಕಾಲಿಯಾ ಗ್ರಾಮದಲ್ಲಿ ಪಾಕಿಸ್ತಾನದ ಡ್ರೋನ್ ಶಬ್ದವನ್ನು ಕೇಳಿದ ಸೈನಿಕರು ಅದರ ಮೇಲೆ 15 ಸುತ್ತು ಗುಂಡು ಹಾರಿಸಿ ಓಡಿಸಿದರು.