ಡೆಹ್ರಾಡೂನ್: ಉದಯಪುರದಲ್ಲಿರುವ ಸಜ್ಜನಗಢ ಅಭಯಾರಣ್ಯದಲ್ಲಿ ರವಿವಾರದಿಂದ ಉಂಟಾಗಿರುವ ಕಾಳ್ಗಿಚ್ಚು ನಿಯಂತ್ರಣಕ್ಕೆ ಐಎಎಫ್ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದೆ.
ಕಾಳ್ಗಿಚ್ಚು ಸುಮಾರು 200 ಎಕ್ರೆ ಕಾಡನ್ನು ನಾಶ ಮಾಡಿದೆ. ಇನ್ನೊಂದೆಡೆ ಉತ್ತರಾಖಂಡದಲ್ಲಿಯೂ ಕೂಡ ಕಾಳ್ಗಿಚ್ಚು ಬಿರುಸಾಗಿದೆ. ಇದರಿಂದಾಗಿ ತಾಪಮಾನ ಕೂಡ ಹೆಚ್ಚಾಗಿದೆ.
ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕಾಳ್ಗಿಚ್ಚು ಸೋಮವಾರ ಮತ್ತೆ ಬಿರುಸಾಗಿದೆ.ಜೋಧ್‌ಪುರದ ಫಲೋಡಿಯಿಂದ ಬೆಂಕಿಗೆ ನೀರು ಹಾಕಿ ನಂದಿಸುವ ಪ್ರಯತ್ನ ಮಾಡಿದೆ.
ಅಗ್ನಿಶಾಮಕ ದಳದ ಹತ್ತಾರು ವಾಹನಗಳೂ ಕೂಡ ಬೆಂಕಿ ನಂದಿಸುವ ಪ್ರಯತ್ನದಲ್ಲಿವೆ ಎಂದು ಜಿಲ್ಲಾಧಿಕಾರಿ ತಾರಾಚಂದ್ ಮೀನಾ ತಿಳಿಸಿದ್ದಾರೆ.