News Kannada
Wednesday, March 29 2023

ರಾಜಸ್ಥಾನ

ಜೈಪುರ : ವರದಕ್ಷಿಣೆ ಹಣದಲ್ಲಿ ವಿದ್ಯಾರ್ಥಿನಿಗಳಿಗೋಸ್ಕರ ಹಾಸ್ಟೆಲ್​ ನಿರ್ಮಾಣ

Photo Credit :

ರಾಜಸ್ಥಾನ: ಮದುವೆ ಮಾಡುವ ಸಂದರ್ಭದಲ್ಲಿ ವರನ ಕಡೆಯವರಿಗೆ ವಧುವಿನ ಕುಟುಂಬಸ್ಥರು ಲಕ್ಷಾಂತರ ರೂಪಾಯಿ ವರದಕ್ಷಿಣೆ ರೂಪದಲ್ಲಿ ನೀಡುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೋರ್ವ ವಧು ತನ್ನ ಗಂಡನಿಗೆ ನೀಡುವ ವರದಕ್ಷಿಣೆ ಹಣದಲ್ಲಿ ವಿದ್ಯಾರ್ಥಿನಿಗಳಿಗೋಸ್ಕರ ಹಾಸ್ಟೆಲ್​ ಕಟ್ಟಿಸುವಂತೆ ಕೇಳಿಕೊಂಡಿದ್ದಾಳೆಂದು ವರದಿಯಾಗಿದೆ.

ಬಾರ್ಮರ್​​ ನಗರದ ಕಿಶೋರ್​ ಸಿಂಗ್ ಕಾನೋಡ್​ ಅವರ ಪುತ್ರಿ ಅಂಜಲಿ ಕನ್ವರ್​​ ನವೆಂಬರ್​​ 21ರಂದು ಪ್ರವೀಣ್​ ಸಿಂಗ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರದಿವೊಂದರ ಪ್ರಕಾರ, ಅಂಜಲಿ ಮದುವೆಯಲ್ಲಿ ವರದಕ್ಷಿಣೆಗಾಗಿ ಮೀಸಲಿಟ್ಟಿರುವ ಹಣದ ಬಗ್ಗೆ ತಂದೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಆ ಎಲ್ಲ ಹಣ ಬಾಲಕಿಯರ ಹಾಸ್ಟೆಲ್​ ನಿರ್ಮಾಣ ಮಾಡಲು ಬಳಸುವಂತೆ ತಿಳಿಸಿದ್ದಾರೆ. ಮಗಳ ಆಸೆಯಂತೆ ಅಂಜಲಿ ತಂದೆ ಕಿಶೋರ್​ ಸಿಂಗ್​ ಒಪ್ಪಿಗೆ ಸೂಚಿಸಿ, 75 ಲಕ್ಷ ರೂ. ಕಟ್ಟಡ ನಿರ್ಮಾಣಕ್ಕಾಗಿ ನೀಡಿದ್ದಾರೆ.

ಅಂಜಲಿ ತೆಗೆದುಕೊಂಡಿರುವ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮದುವೆ ಸಮಾರಂಭದ ವೇಳೆ ಅಂಜಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಅತಿಥಿಗಳಿಗೂ ತಿಳಿಸಲಾಗಿದೆ. ಈ ನಿರ್ಧಾರಕ್ಕಾಗಿ ಶಹಬ್ಬಾಸ್​​ಗಿರಿ ನೀಡಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ, ರಾಜಸ್ಥಾನದ ಎನ್​ಎಚ್​​ 68ನಲ್ಲಿ ಹಾಸ್ಟೆಲ್​ ನಿರ್ಮಾಣಕ್ಕಾಗಿ ಕಾನೋಡ್​​ ಈಗಾಗಲೇ 1 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆಂದು ತಿಳಿದು ಬಂದಿದೆ. ಉಳಿದ ಕಾಮಗಾರಿ ಪೂರ್ಣಗೊಳಿಸಲು 50ರಿಂದ 75 ಲಕ್ಷ ರೂ. ಹೆಚ್ಚುವರಿ ಅಗತ್ಯವಿದ್ದು, ಇದೀಗ ಮಗಳು ಆ ಹಣ ನೀಡಿದ್ದಾರೆ.

See also  ಬಾಲಕಿ ಅತ್ಯಾಚಾರ ಪ್ರಕರಣ: ಕಾಂಗ್ರೆಸ್ ಶಾಸಕನ ಪುತ್ರ ಸೇರಿ ಐವರ ಮೇಲೆ ದೂರು ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು