ಉದಯಪುರ: ಉದಯಪುರದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಟೇಲರ್ ಕನ್ಹಯ್ಯ ಲಾಲ್ ಅವರ ಕುಟುಂಬದವರನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಗುರುವಾರ ಭೇಟಿ ಮಾಡಿ ಸ್ವಾಂತನ ಹೇಳಿದ್ದಾರೆ. ಸರ್ಕಾರದ ವತಿಯಿಂದ ಸಂತ್ರಸ್ತ ಕುಟುಂಬಕ್ಕೆ ₹50 ಲಕ್ಷ ಪರಿಹಾರವನ್ನು ಅವರು ಘೋಷಿಸಿದ್ದಾರೆ.
ಉದಯಪುರದ ಸೆಕ್ಟರ್ 14ರಲ್ಲಿ ಇರುವ, ಕನ್ಹಯ್ಯ ಅವರ ಮನೆಗೆ ಮುಖ್ಯಮಂತ್ರಿಯ ಜತೆಗೆ, ಕಂದಾಯ ಸಚಿವ, ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರು ಭೇಟಿ ನೀಡಿದ್ದರು.
ಕುಟುಂಬದ ಎಲ್ಲಾ ಸದಸ್ಯರ ಜತೆಗೆ ಮಾತನಾಡಿದ ಗೆಹಲೋತ್, ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.