ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಗೆ ನಾಲ್ಕು ಮನೆಗಳು ಕುಸಿದು ಬಿದ್ದ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯ ಕರುಂಗಾಲ್ಪಟ್ಟಿಯಲ್ಲಿ ನಡೆದಿದೆ.
ಮನೆಗಳ ಅವಶೇಷಗಳಡಿ ಕನಿಷ್ಠ 17 ಮಂದಿ ಸಿಲುಕಿಕೊಂಡಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದೆ. ಈ ವೇಳೆ 13 ಮಂದಿಯನ್ನು ರಕ್ಷಿಸಿದಲಾಗಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಸ್ಥಳೀಯರು, ನಾಲ್ಕು ಮನೆಗಳು ಕುಸಿಯುವ ಮುನ್ನ ಭಾರೀ ಶಬ್ದ ಕೇಳಿಸಿದೆ. ಬಳಿಕ ಕೆಲವೇ ಸೆಕೆಂಡುಗಳಲ್ಲಿ ಮನೆಗಳು ನೆಲಸಮಗೊಂಡಿವೆ ಎಂದು ಆತಂಕ ವ್ಯಕ್ತಪಡಿಸಿದರು.