News Kannada
Friday, March 24 2023

ತಮಿಳುನಾಡು

ನಾಯಿಯನ್ನು ಬಡಿದು ಸಾಯಿಸಿದ ಇಬ್ಬರನ್ನು ಬಂಧಿಸಿದ ಪೊಲೀಸರು

Photo Credit :

ನಾಯಿಯೊಂದನ್ನು ಕೋಲುಗಳಿಂದ ಬಡಿದು ಸಾಯಿಸಿದ ಮೂವರು ವ್ಯಕ್ತಿಗಳ ವಿಡಿಯೋ ವೈರಲ್ ಆದ ಬಳಿಕ ಅಖಾಡಕ್ಕಿಳಿದ ಪೊಲೀಸರು ಅವರನ್ನು ಬಂಧಿಸಿದ ಘಟನೆ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯಲ್ಲಿ ನಡೆದಿದೆ.

ಸ್ವಲ್ಪ ದೂರದಿಂದ ಸೆರೆ ಹಿಡಿಯಲಾದ ಈ ವಿಡಿಯೋದಲ್ಲಿ, ಅಸಹಾಯಕತೆಯಿಂದ ಕೂಗಿಕೊಳ್ಳುತ್ತಿರುವ ನಾಯಿಯೊಂದಕ್ಕೆ ಇವರು ಹಲ್ಲೆ ಮಾಡುತ್ತಿರುವುದನ್ನು ನೋಡಬಹುದಾಗಿದ್ದು, ಕೊನೆಯಲ್ಲಿ ಸ್ತಬ್ಧವಾದ ನಾಯಿಯ ದೇಹವನ್ನು ನೆಲದ ಮೇಲೆ ಎಳೆದಾಡಿಕೊಂಡು ಹೋಗಿ ಬಿಸಾಡಿದ್ದಾರೆ.

ಈ ನಾಯಿಯು ಸುಂದರಂ ಎಂಬ ವ್ಯಕ್ತಿ ಸಾಕುತ್ತಿದ್ದ ಮೇಕೆಗಳ ಮೇಲೆ ಪದೇ ಪದೇ ದಾಳಿ ಮಾಡಿ ಕಚ್ಚುತ್ತಿದ್ದ ಕಾರಣದಿಂದ ಅದರ ಮೇಲೆ ಕೋಪಗೊಂಡ ಸುಂದರಂ ಹಾಗೂ ಸಂಗಡಿಗರು, ಪ್ರತೀಕಾರದಿಂದ ಈ ಕೆಲಸಕ್ಕೆ ಮುಂದಾಗಿದ್ದಾರೆ.

ತೂತ್ತುಕುಡಿಯ ಶಾಂತಕುಳಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಸುಂದರಂ ಹಾಗೂ ಆತನ ಸಹಚರ ದಾಸ್‌ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಮೂರನೇಯಾತನಿಗೆ ಹುಡುಕಾಟದಲ್ಲಿದ್ದಾರೆ.

See also  ಪುದುಚೆರಿ: ಪಟಾಕಿ ಸ್ಫೋಟಗೊಂಡು ತಂದೆ-ಮಗ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು