News Kannada
Tuesday, March 28 2023

ತಮಿಳುನಾಡು

ಸ್ಮಶಾನದಲ್ಲಿ ಬರೋಬ್ಬರಿ 16 ಕೆಜಿ ಚಿನ್ನ ಪತ್ತೆ

gold jewellery
Photo Credit :

ಚೆನ್ನೈ : ಖದೀಮನೊಬ್ಬ ತಾನು ಕದ್ದಿದ್ದ ಬರೋಬ್ಬರಿ 16 ಕೆಜಿಯಷ್ಟು ಚಿನ್ನವನ್ನು ಸ್ಮಶಾನದಲ್ಲಿ ಹೂತಿಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾನೆ.

ವೆಲ್ಲೂರಿನಲ್ಲಿ ಇತ್ತೀಚೆಗೆ ಖದೀಮನೊಬ್ಬ ಮುಸುಕು ವೇಷದಲ್ಲಿ ಬಂದು ಚಿನ್ನದಂಗಡಿ ದೋಚಿ ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಕಳ್ಳನನ್ನು ಹಿಡಿಯಲು ಪೊಲೀಸರ ತಂಡ ರಚಿಸಲಾಗಿತ್ತು. ಕೊನೆಗೂ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕಳ್ಳ ಒಡುಕತ್ತೂರಿನಲ್ಲಿ ಇರುವ ಸ್ಮಶಾನದಲ್ಲಿ ಕದ್ದ ಚಿನ್ನವನ್ನು ಅಡಗಿಸಿಟ್ಟಿದ್ದ. ವೆಲ್ಲೂರು ಪೊಲೀಸರು ಕಳ್ಳನನ್ನು ಬಂಧಿಸಿದ್ದು, ಸ್ಮಶಾನದಲ್ಲಿ ಅಡಗಿಸಿಟ್ಟಿದ್ದ 16 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಕಳ್ಳನ ಕುರಿತು ಪೊಲೀಸರಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

See also  ಕೊರೋನಾ ಹೆಚ್ಚಳ: ಮತ್ತೆ ಮಾಸ್ಕ್ ಕಡ್ಡಾಯಗೊಳಿಸಿದ ತಮಿಳುನಾಡು ಸರ್ಕಾರ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು