News Kannada
Tuesday, December 06 2022

ತಮಿಳುನಾಡು

ತಮಿಳುನಾಡು: ಸ್ನೇಹಿತರ ಸಹಾಯದಿಂದ ತಾಯಿಯನ್ನೇ ಕೊಂದ ಮಗಳು

Photo Credit : IANS

ತಮಿಳುನಾಡು : ಕೆಟ್ಟ ಮಕ್ಕಳು  ಇರಬಹುದು, ಆದರೆ ಕೆಟ್ಟ ತಾಯಿ  ಇರಲಿಕ್ಕಿಲ್ಲ ಅಂತಾರೆ. ಆದರೆ ಈ ಘಟನೆಯಲ್ಲಿ ಎರಡೂ ನಡೆದಿದೆ. ಇಲ್ಲಿ ಕೆಟ್ಟ ತಾಯಿಯೂ ಇದ್ದಾಳೆ, ಹಾಗೆಯೇ ಕೆಟ್ಟ ಮಗಳೂ ಇದ್ದಾಳೆ. ಇಲ್ಲಿ ಮಗಳೇ ತಾಯಿಯನ್ನು ಕೊಂದು ಬಿಟ್ಟಿದ್ದಾಳೆ.

ಕೇಳಿದರೆ ತಾಯಿ ಮಾಡಿದ ಕೆಲಸಕ್ಕೆ ಇದೇ ಶಿಕ್ಷೆ ಅಂತಾಳೆ. ತಮಿಳುನಾಡಿನಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಈ ಘಟನೆ ಬಗ್ಗೆ ತಿಳಿದು ಇಡೀ ತಮಿಳುನಾಡಿನ ಜನರೇ ಬೆಚ್ಚಿ ಬಿದ್ದಿದ್ದಾರೆ.

ತಮಿಳುನಾಡಿನ ತೂತುಕುಡಿಯಲ್ಲಿ ಇಂಥದ್ದೊಂದು ಭೀಕರ ಘಟನೆ ನಡೆದಿದೆ. 17 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಯನ್ನು ತನ್ನ ಇಬ್ಬರು ಸ್ನೇಹಿತರ ಸಹಾಯದಿಂದ ಶನಿವಾರ ರಾತ್ರಿ ಭೀಕರವಾಗಿ ಕೊಲೆ ಮಾಡಿದ್ದಾಳೆ.

ಈ 17 ವರ್ಷ ವಯಸ್ಸಿನ ಆರೋಪಿ ಬಾಲಕಿ ತನ್ನ ತಂದೆಯೊಂದಿಗೆ ವಾಸಿಸುತ್ತಾ ಇದ್ದಳು. ಈಕೆಯ ತಂದೆ ತಾಯಿ ಡಿವೋರ್ಸ್ ಪಡೆದು, ಬೇರೆ ಬೇರೆಯಾಗಿ ವಾಸಿಸುತ್ತಾ ಇದ್ದರು. ಹುಡುಗಿ ನಾಲ್ಕು ಮಕ್ಕಳಲ್ಲಿ ಹಿರಿಯಳು. ಆಕೆಗೆ 14 ಮತ್ತು 13 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಮತ್ತು ನಾಲ್ಕು ವರ್ಷದ ಸಹೋದರ ಇದ್ದಾರೆ. ಅವರೆಲ್ಲರೂ ಸುಮಾರು ಒಂದು ವರ್ಷದ ಹಿಂದೆ ಪೋಷಕರು ಬೇರ್ಪಟ್ಟ ನಂತರ ಅವರ ತಂದೆಯೊಂದಿಗೆ ವಾಸಿಸುತ್ತಿದ್ದಾರೆ.

ಈ ಬಾಲಕಿ ಡಿಪ್ಲೋಮಾ ಓದುತ್ತಿದ್ದಳು. ಬಳಿಕ ಅದನ್ನು ಕಂಪ್ಲೀಟ್ ಮಾಡಲು ಆಗದೇ ಅರ್ಧಕ್ಕೆ ಬಿಟ್ಟಿದ್ದಳು ಎನ್ನಲಾಗಿದೆ. ಈಕೆಯ ಉಳಿದ ಸಹೋದರ ಹಾಗೂ ಸಹೋದರಿಯರು ಶಾಲೆಗೆ ಹೋಗುತ್ತಿದ್ದರು.

ಮಧ್ಯರಾತ್ರಿಯ ವೇಳೆಗೆ, ಈ ಬಾಲಕಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮನೆಯಲ್ಲಿ ತನ್ನ ತಾಯಿಯನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ಕರೆ ಮಾಡಿದ್ದಾಳೆ. ಕೂಡಲೇ ಸ್ಥಳಕ್ಕಾಗಮಿಸಿದ ತೂತುಕುಡಿ ದಕ್ಷಿಣ ಪೊಲೀಸರಿಗೆ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ಶವದ ಪಕ್ಕದಲ್ಲಿ ಕುಳಿತಿದ್ದು ಕಂಡು ಬಂದಿದೆ.

ಮೊದಲು ಯಾರೋ ಕೊಲೆ ಮಾಡಿದ್ದಾರೆ ಅಂತ ಹೇಳಿದ ಬಾಲಕಿ, ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ. ಬಾಲಕಿ ಮತ್ತು ಆಕೆಯ ಇಬ್ಬರು ಸಹಚರರು ಆರೋಗ್ಯ ಕಾರ್ಯಕರ್ತೆಯಾಗಿರುವ ಆಕೆಯ ತಾಯಿಯ ಮುಖ ಮತ್ತು ದೇಹದ ಮೇಲೆ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೌದು, ಇಂಥದ್ದೊಂದು ಆಘಾತರಕಾರಿ ವಿಚಾರವನ್ನು ಈ ಬಾಲಕಿ ಪೊಲೀಸರ ಮುಂದೆ ಹೇಳಿದ್ದಾಳೆ. ಆಕೆಯ ತಾಯಿಯೇ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿದ್ದಳಂತೆ. ಇದೇ ವಿಚಾರಕ್ಕೆ ತಾಯಿ ಹಾಗೂ ಮಗಳ ನಡುವೆ ಗಲಾಟೆ ನಡೆದಿದೆ ಅಂತ ಹೇಳಲಾಗಿದೆ.

ಈ ಕೇಸ್‌ನಲ್ಲಿ ಬಾಲಕಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಬಾಲಗೃಹಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇಬ್ಬರು ಯುವಕರ ಪತ್ತೆಗೆ ಮುಂದಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

See also  ಟಿಎನ್, ಕೇರಳ, ಪುದುಚೇರಿ, ಎಪಿ, ಕರ್ನಾಟಕದಲ್ಲಿ ನವೆಂಬರ್ 1 ರವರೆಗೆ ಭಾರೀ ಮಳೆಯಾಗಲಿದೆ ಎಂದು ಐಎಮ್ ಡಿ ಮುನ್ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು