News Kannada
Friday, September 30 2022

ತಮಿಳುನಾಡು

ಚೆನ್ನೈ: ಹೊತ್ತಿ ಉರಿದ ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ - 1 min read

Uttar Pradesh: Woman sets husband on fire, kills him
Photo Credit : IANS

ಚೆನ್ನೈ: ಶನಿವಾರ ಬೆಳಗ್ಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಮತ್ತೊಂದು ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ. ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ನಿವಾಸಿ ಸತೀಶ್ ಅವರು ಕಳೆದ ವರ್ಷ ಒಕಿನಾವಾ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನವನ್ನು ಖರೀದಿಸಿದ್ದರು.

ಶನಿವಾರ ಮುಂಜಾನೆ ಸತೀಶ್ ತಮ್ಮ ಕಚೇರಿಯ ಸಮೀಪ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಲು ಮುಂದಾಗಿದ್ದಾರೆ. ಆಗಲೇ ಸೀಟ್‌ ಕೆಳಗೆ ಹೊಗೆ ಹೊರಹೊಮ್ಮುವುದನ್ನು ಗಮನಿಸಿದ್ದಾರೆ. ಅವರು ಸೀಟ್ ಅನ್ನು ಎತ್ತಿದ ಸ್ವಲ್ಪ ಸಮಯದ ನಂತರ, ಬೆಂಕಿ ಆವರಿಸಿಕೊಂಡು ಅವರ ಸ್ಕೂಟರ್ ಸುಟ್ಟುಹೋಗಿದೆ.

ಕೂಡಲೇ ಸ್ಥಳೀಯರ ಸಹಾಯದಿಂದ ಸತೀಶ್ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆ ವೇಳೆಗಾಗಲೇ ಸ್ಕೂಟರ್ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಇತ್ತೀಚಿನ ದಿನಗಳಲ್ಲಿ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ ಬ್ಯಾಟರಿ ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹೀಗಾಗಿಯೇ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಒಕಿನಾವಾ ಮತ್ತು ಓಲಾ ಹಲವಾರು ವಾಹನಗಳನ್ನು ಹಿಂಪಡೆದಿವೆ.

See also  ಓಲಾ ಇವಿ ಸ್ಕೂಟರ್‌: ಬೆಂಗಳೂರು ಮತ್ತು ಚೆನ್ನೈನ ಗ್ರಾಹಕರಿಗೆ ಡೆಲಿವರಿ ಆರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು