News Kannada
Monday, February 06 2023

ತಮಿಳುನಾಡು

ತಮಿಳುನಾಡು: ಬಿಜೆಪಿಯ ಎಸ್‌ಸಿ/ಎಸ್‌ಟಿ ಮುಖಂಡನ ಕೊಲೆ

Photo Credit :

ತಮಿಳುನಾಡು: ಬಿಜೆಪಿಯ ಎಸ್‌ಸಿ/ಎಸ್‌ಟಿ ಮುಖಂಡ ಬಾಲಚಂದರ್ (30) ನನ್ನು ಮೂವರು ದುಷ್ಕರ್ಮಿಗಳು ಮಂಗಳವಾರ ತಮಿಳುನಾಡಿನ ಚಿಂತಾದ್ರಿಪೇಟೆಯಲ್ಲಿ ಕೊಂದಿದ್ದಾರೆ.

ಬಾಲಚಂದರ್ ಅವರು ಬಿಜೆಪಿಯ ಎಸ್‌ಸಿ/ಎಸ್‌ಟಿ ಸೆಂಟ್ರಲ್ ಚೆನ್ನೈ ಮುಖ್ಯಸ್ಥರಾಗಿದ್ದರು. ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದರಿಂದ ಭದ್ರತೆಗಾಗಿ ಅವರಿಗೆ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್‌ಒ) ಒದಗಿಸಲಾಗಿತ್ತು.

ಬಾಲಚಂದರ್ ಸಾಮಿನಾಯಕನ್ ರಸ್ತೆಯಲ್ಲಿ ನಿಂತು ಬೇರೆಯವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಅವರ ಗನ್‌ಮ್ಯಾನ್‌ ಚಹಾ ಕುಡಿಯಲು ಹೋಗಿದ್ದರು. ಅದೇ ಸಮಯದಲ್ಲಿ, ಮೂವರು ವ್ಯಕ್ತಿಗಳು ಅವನನ್ನು ಸುತ್ತುವರೆದು ಬರ್ಬರವಾಗಿ ಕೊಂದಿದ್ದಾರೆ.

ಬಾಲಚಂದರ್ ಅವರ ಪಿಎಸ್‌ಒ ಆಗಿದ್ದ ಬಾಲಕೃಷ್ಣನ್ ಹಿಂತಿರುಗುವ ಮುನ್ನವೇ ಗ್ಯಾಂಗ್ ದ್ವಿಚಕ್ರ ವಾಹನಗಳನ್ನು ಹತ್ತಿ ಸ್ಥಳದಿಂದ ಪರಾರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೆನ್ನೈ ಪೊಲೀಸ್​ ಆಯುಕ್ತ ಶಂಕರ್​ ಜಿವಾಲ್​, ಹಳೆಯ ವೈಷಮ್ಯದಿಂದ ಬಾಲಚಂದರ್ ಕೊಲೆಯಾಗಿದೆ. ಈ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಕಲೆ ಹಾಕುತ್ತಿದ್ದೇವೆ. ಕೊಲೆ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದಿದ್ದಾರೆ.

See also  ಚೆನ್ನೈ: ಬಿಟೆಕ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು