ಚೆನ್ನೈ: ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಮಹಿಳೆಯೊಬ್ಬಳನ್ನು ಆಕೆಯ ಮಗ ಹಾಗೂ ಸೊಸೆ ಸೇರಿ ಹತ್ಯೆಗೈದ ಘಟನೆ ನಡೆದಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿ ಈ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಎಸ್. ಅಣ್ಣಾಮಲೈ (47) ಮತ್ತು ಪತ್ನಿ ಎ. ಅನಿತಾ (42) ಸೇರಿ ಎಸ್. ಅರಸಮ್ಮಲ್ (70) ಅನ್ನು ಹತ್ಯೆ ಮಾಡಿದ್ದಾರೆ. ಅರಸಮ್ಮಲ್ ತನ್ನ ಪತಿ ತೀರಿಕೊಂಡ ನಂತರ ತಿರುನಲ್ವೇಲಿಯ ಕೆಟಿಸಿ ನಗರದಲ್ಲಿನ ಮನೆಯಲ್ಲಿ ತನ್ನ ಮಗ ಹಾಗೂ ಸೊಸೆಯೊಂದಿಗೆ ವಾಸವಿದ್ದಳು.
ಆಸ್ತಿ ವಿಷಯಕ್ಕೆ ಅನಿತಾ ಹಾಗೂ ಅರಸಮ್ಮಲ್ ನಡುವೆ ಜಗಳವಾಗಿತ್ತು. ಈ ವೇಳೆ ಅರಸಮ್ಮಲ್ ಅನ್ನು ಅನಿತಾ ತಳ್ಳಿದ್ದು, ಈ ವೇಳೆ ಅರಸಮ್ಮಲ್ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.