News Kannada
Tuesday, November 29 2022

ತಮಿಳುನಾಡು

ಕೊಯಮತ್ತೂರು: ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 45ಕ್ಕೂ ಹೆಚ್ಚಿನ ಕಡೆ ಎನ್‌ಐಎ ದಾಳಿ - 1 min read

Kasargod: PFI district president C. NIA raids T Sulaiman's house
Photo Credit : IANS

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ತನಿಖಾ ದಳ ದೊಡ್ಡ ಕ್ರಮ ಕೈಗೊಂಡಿದೆ.

ಅದರಂತೆ ಗುರುವಾರ ಮುಂಜಾನೆ ಎನ್‌ಐಎ ತಂಡ ಕೊಯಮತ್ತೂರಿನ 21 ಸ್ಥಳಗಳು ಸೇರಿದಂತೆ ತಮಿಳುನಾಡಿನ 45 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಅಕ್ಬೋಬರ್ 23 ರ ಭಾನುವಾರ ಕೊಯಮತ್ತೂರಿನ ಈಶ್ವರನ್ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಎಲ್ ಪಿಜಿ ಸಿಲಿಂಡರ್ ಅಳವಡಿಸಿದ್ದ ಕಾರೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿತ್ತು.

ಈ ಘಟನೆಯಲ್ಲಿ ಜಮೀಶಾ ಮುಬಿನ್ ಎಂಬ ವ್ಯಕ್ತಿ ಮೃತಪಟ್ಟಿದ್ದ. ಪ್ರಕರಣದ ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಜಮೀಶಾ ಮುಬಿನ್​ ಮನೆಯಿಂದ ದೇಶಿ ನಿರ್ಮಿತ ಮದ್ದುಗುಂಡುಗಳು ಮತ್ತು ಕೆಲವು ಐಸಿಸ್​ ಬೆಂಬಲಿತ ಬರಹಗಳನ್ನು ವಶಪಡಿಸಿಕೊಂಡಿದ್ದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ತನಿಖಾ ತಂಡ ಗುರುವಾರ ಮುಂಜಾನೆ ಕೊಯಮತ್ತೂರು ಸೇರಿ ತಮಿಳುನಾಡಿನ ಕೆಲವೊಂದು ಸ್ಥಳಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದು ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದೆ.

See also  ದೆಹಲಿ: ಗೃಹಬಳಕೆಯ ಅಡುಗೆ ಸಿಲಿಂಡರ್‌ಗಳ ಬೆಲೆ ಏರಿಕೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30409

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು