ಚೆನ್ನೈ: ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಯುವತಿಯೊಬ್ಬರು ಲಾರಿ ಅಡಿಗೆ ಬಿದ್ದು ಸಾವಿಗೀಡಾದ ದಾರುಣ ಘಟನೆ ಚೆನ್ನೈನಲ್ಲಿ ನಡೆದಿದೆ.
22 ವರ್ಷದ ಶೋಭನಾ ಎಂಬವರೇ ಮೃತ ದುರ್ದೈವಿ. ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಶೋಭನಾ, ತನ್ನ ಸಹೋದರನನ್ನು ನೀಟ್ ತರಬೇತಿ ತರಗತಿಗೆ ಕರೆದುಕೊಂಡು ಹೋಗುವಾಗ ಘಟನೆ ನಡೆದಿದೆ.
ಶೋಭನಾ ಹಾಗೂ ಅವರ ಸಹೋದರ ಇಬ್ಬರೂ ಕೂಡ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅಫಘಾತ ನಡೆದ ಕೂಡಲೇ ಟ್ರಕ್ ಚಾಲಕ ಪರಾರಿಯಾಗಿದ್ದು, ಬಳಿಕ ಆತನನ್ನು ಬಂಧಿಸಲಾಗಿದೆ. ಆತನ ಹೆಸರು ಮೋಹನ್ ಎಂದು ಗೊತ್ತಾಗಿದೆ.