ಚೆನ್ನೈ: ಸೊಸೆಯ ಮೇಲೆ ಆಸಿಡ್ ಎರಚಿದ ಆರೋಪದ ಮೇಲೆ ತಮಿಳುನಾಡಿನ ಕಡಲೂರು ಜಿಲ್ಲೆಯ ವೃದ್ಧಾಚಲಂನಲ್ಲಿ ಸೋಮವಾರ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಮಲಗಿದ್ದ ಕೃತಿಕಾ (26) ಎಂಬಾಕೆಯ ಮುಖದ ಮೇಲೆ 55 ವರ್ಷದ ಆಂಡಾಲ್ ಆಸಿಡ್ ಎರಚಿದ್ದಾಳೆ.
ಆಂಡಾಳ್ ಅವರ ಮಗ ಮುಖೇಶ್ ರಾಜ್ ಅವರು ಕೃತಿಕಾ ಅವರನ್ನು ಕಳೆದ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು ಮತ್ತು ಅವರಿಗೆ 5 ಮತ್ತು 1 ವರ್ಷದ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಕೇಶ್ ತಿರುಪುರದ ಅವಿನಾಶಿಯಲ್ಲಿರುವ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ, ಕೃತಿಕಾ ತನ್ನ ಅತ್ತೆ ಆಂಡಾಲ್ ಜೊತೆ ವಾಸಿಸುತ್ತಿದ್ದಾರೆ.
ಕೃತಿಕಾ ತನ್ನ ಮಗನ ಮೇಲಿನ ನಿಷ್ಠೆಯನ್ನು ಶಂಕಿಸಿ ಆಂಡಾಳ್ ತನ್ನ ಸೊಸೆಯ ಮೇಲೆ ಹಲ್ಲೆ ನಡೆಸಿದ್ದಾಳೆ. ಕೃತಿಕಾ ಅವರ ಮುಖ ಮತ್ತು ದೇಹಕ್ಕೆ ಗಾಯಗಳಾಗಿವೆ. ಸದ್ಯ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಕೃತಿಕಾಳ ಅಳಲು ಕೇಳಿದ ನೆರೆಹೊರೆಯವರು ಮನೆಗೆ ಬಂದು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕೃತಿಕಾ ಅವರ ದೂರಿನ ಮೇರೆಗೆ ವೃದ್ಧಾಚಲಂ ಪೊಲೀಸರು ಆಂಡಾಲ್ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.