ಚೆನ್ನೈ,: ಚೆನ್ನೈ ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು (ಎನ್‌ಐಟಿಬಿ) ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿದರು. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕೇಂದ್ರ ನಾಗರಿಕ ವಿಮಾನಯಾನ ಮತ್ತು ಉಕ್ಕು ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಮತ್ತು ಮಾಹಿತಿ ಖಾತೆ ರಾಜ್ಯ ಸಚಿವರ ಸಮ್ಮುಖದಲ್ಲಿ ಸುಮಾರು 1,260 ಕೋಟಿ ರೂಪಾಯಿ ವೆಚ್ಚದ ಎನ್‌ಐಟಿಬಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಸುಮಾರು 2,20,972 ಚ.ಮೀ ವಿಸ್ತೀರ್ಣ ಹೊಂದಿರುವ ಈ ಟರ್ಮಿನಲ್ ಚೆನ್ನೈ ವಿಮಾನನಿಲ್ದಾಣದ ಪ್ರಯಾಣಿಕ ದಟ್ಟಣೆ ಮತ್ತು ಏರ್ ಟ್ರಾಫಿಕ್ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಈಗ ನಿರ್ಮಾಣವಾದ ಟಿ-2 ಮೂಲಕ ಚೆನ್ನೈ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ವರ್ಷಕ್ಕೆ 23 ಮಿಲಿಯನ್‌ನಿಂದ 30 ಮಿಲಿಯನ್‌ಗೆ ಹೆಚ್ಚಿಸಬಹುದಾಗಿದೆ.
ಕಾರ್ಯಕ್ರಮಕ್ಕೂ ಮುನ್ನ ಮೋದಿ ಅವರನ್ನು ರಾಜ್ಯಪಾಲ ರವಿ, ಮುಖ್ಯಮಂತ್ರಿ ಸ್ಟಾಲಿನ್ ಮತ್ತಿತರರು ಸ್ವಾಗತಿಸಿದರು.