ಚೆನ್ನೈ: ಕರ್ನಾಟಕದಿಂದ ತಮಿಳುನಾಡಿಗೆ ಬರಬೇಕಾದ ಕಾವೇರಿ ನೀರಿನ ಪಾಲನ್ನು ಪಡೆಯಲು ಸುಪ್ರೀಂ ಕೋರ್ಟ್ ಮಾತ್ರ ನಮಗಿರುವ ಏಕೈಕ ದಾರಿ ಎಂದು ತಮಿಳುನಾಡು ಜಲಸಂಪನ್ಮೂಲ ಸಚಿವ ಮತ್ತು ಹಿರಿಯ ಡಿಎಂಕೆ ನಾಯಕ ಎಸ್.ದುರೈ ಮುರುಗನ್ ಗುರುವಾರ ಹೇಳಿದ್ದಾರೆ.
ಈ ವಿಚಾರದಲ್ಲಿ ತಮಿಳುನಾಡು ಸರ್ಕಾರ ಕರ್ನಾಟಕದೊಂದಿಗೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಚೆನ್ನೈನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ದುರೈ ಮುರುಗನ್, ತಮಿಳುನಾಡು ಕರ್ನಾಟಕದೊಂದಿಗೆ ಹಲವಾರು ವರ್ಷಗಳಿಂದ ಈ ಕುರಿತು ಮಾತುಕತೆ ನಡೆಸಿದೆ ಆದರೆ ಯಾವುದೇ ಫಲಿತಾಂಶವಿಲ್ಲ ದೊರೆತಿಲ್ಲ ಎಂದು ಹೇಳಿದರು.
“ಕಾವೇರಿ ಜಲವಿವಾದದ ವಿಷಯದಲ್ಲಿ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿಯಾಗಿದೆ. ನಾವು ಈ ವಿಚಾರದಲ್ಲಿ ಬಹಳ ದೂರ ಸಾಗಿದ್ದೇವೆ. ಹಾಗಾಗಿ ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರದೊಂದಿಗೆ ಯಾವುದೇ ಮಾತುಕತೆ ಇಲ್ಲ ಎಂದರು. ಸುಪ್ರೀಂ ಕೋರ್ಟ್ ಮಾತ್ರ ನಮಗಿರುವ ಆಯ್ಕೆಯಾಗಿದೆ ಎಂದು ಅವರು ಹೇಳಿದರು.