News Karnataka Kannada
Wednesday, April 24 2024
Cricket
ತಮಿಳುನಾಡು

ಮೇ 23ರಂದು ಜಪಾನ್ ಗೆ ಭೇಟಿ ನೀಡಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್

ಈ ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಬಿಡಬಾರದು ಎಂಬ ಒಂದೇ ಗುರಿಯನ್ನು ಎಲ್ಲರೂ ಹೊಂದಿರಬೇಕು ಎಂದು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ ಹೇಳಿದ್ದಾರೆ.
Photo Credit : IANS

ಚೆನ್ನೈ, ಮೇ.9: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೇ 23ರಂದು ಜಪಾನ್ ಗೆ ಭೇಟಿ ನೀಡಲಿದ್ದಾರೆ.

2024 ರ ಜನವರಿಯಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ಹೂಡಿಕೆ ಸಮಾವೇಶಕ್ಕೆ ಜಪಾನಿನ ಕಂಪನಿಗಳನ್ನು ಆಹ್ವಾನಿಸುವುದಾಗಿ ಅವರು ತಿಳಿಸಿದ್ದಾರೆ.

ಚೆನ್ನೈನಲ್ಲಿ ಜಪಾನಿನ ಪ್ರಮುಖ ಮಿಟ್ಸುಬಿಷಿ ಹೊಸ ಎಸಿ ಸ್ಥಾವರಕ್ಕೆ ಶಿಲಾನ್ಯಾಸ ಮಾಡಿದ ನಂತರ ಸ್ಟಾಲಿನ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ತಮ್ಮ ಜಪಾನ್ ಪ್ರವಾಸವು ಭಾರತ-ಜಪಾನ್ ಸ್ನೇಹವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ತಮಿಳುನಾಡು ಕೈಗಾರಿಕಾ ಸಚಿವ ತಂಗಂ ತೆನರಸು, ಕಜುಹಿಕೊ ತಮುರಾ, ಎಂಡಿ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾದ  ಗ್ರೂಪ್ ಅಧ್ಯಕ್ಷ ಮಿಟ್ಸುಬಿಷಿ ಮತ್ತು ಚೆನ್ನೈನಲ್ಲಿರುವ ಜಪಾನ್ ಕಾನ್ಸುಲ್ ಜನರಲ್ ಮಸಾಯುಕಿ ಟಾಗಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೇ 7, 2021 ರಂದು ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಯುಎಇಯ ದುಬೈ ಪ್ರವಾಸ ಕೈಗೊಂಡಿದ್ದು  ಇದರಿಂದ 6,000 ಕೋಟಿ ರೂ.ಗಳ ಹೂಡಿಕೆ ಹರಿದುಬಂದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು