ಚೆನ್ನೈ: ಕರ್ನಾಟಕದಲ್ಲಿ ತೀವ್ರ ಬರದ ಪರಿಸ್ಥಿತಿಯಿದೆ. ಮಳೆಗಾಲದಲ್ಲಿಯೇ ಸುಡುಬಿಸಿಲಿನ ವಾತಾವರಣ ಇದೆ. ನೀರಿಲ್ಲದೆ ಕೆರೆಕಟ್ಟೆಗಳು, ಅಣೆಕಟ್ಟುಗಳು ಬರಿದಾಗಿವೆ. ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್ ಎಸ್ ಅಣೆಕಟ್ಟಿನಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಇಂದು ಬೆಂಗಳೂರು ಬಂದ್ಗೆ ಕರೆ ನೀಡಿದ್ದವು. ಆದರೆ ತಮಿಳುನಾಡಿನಲ್ಲಿ ಬೇರೆಯದೇ ಸ್ಥಿತಿಯಿದೆ ಅಲ್ಲಿ ಭಾರಿ ಮಳೆಯಾಗುತ್ತಿದ್ದು, ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಆದರೂ ಕೂಡ ತಮಿಳುನಾಡು ಕಾವೇರಿ ನೀರು ಬಿಡುಗಡೆ ಮಾಡುವಂತೆ ಒತ್ತಾಯ ಮಾಡುತ್ತಿದೆ. ಸೆಪ್ಟೆಂಬರ್ 26 ರಂದ ಅಕ್ಟೋಬರ್ 1ರ ವರೆಗೆ ತಮಿಳುನಾಡು, ಪುದುಚೇರಿ, ಕಾರಕೈಲ್ ವಲಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವರ್ಷದಲ್ಲಿ ತಮಿಳುನಾಡಿನಲ್ಲಿ ಉತ್ತಮ ಮಳೆಯಾಗಿದೆ. ಹಲವು ಭಾಗದಲ್ಲಿ ಭಾರಿ ಮಳೆಯಿಂದ ಜಲಾವೃತಗೊಂಡ ಘಟನೆಗಳು ನಡೆದಿದೆ.
ಭಾರಿ ಮಳೆಯಾಗುತ್ತಿದ್ದರೂ ಕಾವೇರಿ ನೀರಿಗೆ ಬೊಬ್ಬಿಡುತ್ತಿರುವ ತಮಿಳುನಾಡು

Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.