ಚೆನ್ನೈ: ದಿನನಿತ್ಯ ತಮ್ಮ ಹೇಳಿಕೆಗಳ ಮೂಲಕವೇ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿಲ್ಲ. ಇದಕ್ಕೆ ಮುಖ್ಯ ಕಾರಣ ದ್ರೌಪದಿ ಮುರ್ಮು ವಿಧವೆ. ಇಷ್ಟೇ ಅಲ್ಲ ಆದಿವಾಸಿ ಮಹಿಳೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ನೂತನ ಸಂಸತ್ ಭವನ ಉದ್ಘಾಟನೆಗೆ ತಮಿಳುನಾಡಿನ ಅಧೀನಂ ಸ್ವಾಮಿಜಿಗಳನ್ನು ಕರೆಸಿದ್ದಾರೆ. ಆದರೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ ನೀಡಿಲ್ಲ. ದ್ರೌಪದಿ ಮುರ್ಮು ವಿಧವೆ ಹಾಗೂ ಆದಿವಾಸಿ ಮಹಿಳೆ ಅನ್ನೋ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಕರೆಸಿಲ್ಲ. ಇದು ಸನಾತನ ಧರ್ಮವೇ ಎಂದು ಉದಯನಿಧಿ ಸ್ಟಾಲಿನ್ ಪ್ರಶ್ನಿಸಿದ್ದಾರೆ. ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಪಕ್ಷ ದ್ರೌಪದಿ ಮುರ್ಮು ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಅನ್ನೋದನ್ನು ರಾಜಕೀಯವಾಗಿ ಬಳಸಿಕೊಳ್ಳಿ. ಆದರೆ ಮುರ್ಮು ವಿಧವೆ, ಆದಿವಾಸಿ ಮಹಿಳೆ ಎಂದು ಕೀಳು ಮಟ್ಟದ ರಾಜಕೀಯ ಪ್ರದರ್ಶಿಸಬೇಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಇದೇ ವೇಳೆ ರಾಜ್ಯಸಭೆಯಲ್ಲಿ ಸ್ಪೀಕರ್, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಈ ಕುರಿತು ಆರೋಪ ಮಾಡುತ್ತಿರುವವರಿಗೆ ಖಡಕ್ ಉತ್ತರ ನೀಡಿದ್ದಾರೆ. ಈ ಉತ್ತರವನ್ನು ಕೇಳಿಸಿಕೊಳ್ಳಿ ಎಂದು ಉದಯನಿಧಿ ಸ್ಟಾಲಿನ್‌ಗೆ ಸಲಹೆ ನೀಡಿದ್ದಾರೆ.