News Kannada
Saturday, December 10 2022

ತೆಲಂಗಾಣ

ಹೃದಯಾಘಾತಕ್ಕೆ ಒಳಗಾಗಿದ್ದ ರೋಗಿಗೆ ಚಿಕಿತ್ಸೆ ನೀಡುತಿದ್ದ ವೈದ್ಯ ಹೃದಯಾಘಾತದಿಂದ ಸಾವು

Photo Credit :

ಕಾಮಾರೆಡ್ಡಿ (ತೆಲಂಗಾಣ) : ಹೃದಯಾಘಾತಕ್ಕೆ ಒಳಗಾಗಿರುವ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಲೇ ವೈದ್ಯರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತೆಲಂಗಾಣದ ಕಾಮಾರೆಡ್ಡಿ ಎಂಬಲ್ಲಿ ನಡೆದಿದೆ.ವೈದ್ಯ ಲಕ್ಷ್ಮಣ್​​ ಎಂಬುವವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಇವರು ಕಾಮಾರೆಡ್ಡಿಯ ಜಿಲ್ಲೆಯ ಗಾಂಧಾರಿ ಮಂಡಲದ ನಿವಾಸಿ ಸರ್ಜು ಎಂಬುವವರಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತವಾಗಿದೆ. ಸರ್ಜು ಅವರಿಗೆ ಹೃದಯಾಘಾತವಾಗಿತ್ತು. ಈ ವೇಳೆ ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.

ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಡಾ.ಲಕ್ಷ್ಮಣ್‌ ಚಿಕಿತ್ಸೆ ನೀಡುತ್ತಿದ್ದರು. ತಕ್ಞಣ ಅವರು ಕುಸಿದುಬಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ. ಸರ್ಜುವನ್ನು ಕಾಮಾರೆಡ್ಡಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾರೂ, ಮಾರ್ಗಮಧ್ಯೆ ಸರ್ಜು ಸಾವನ್ನಪ್ಪಿದ್ದಾರೆ. ಈ ನಡುವೆಯೇ ಚಿಕಿತ್ಸೆ ಮಾಡುವ ಪೂರ್ವದಲ್ಲಿಯೇ ರೋಗಿ ಸರ್ಜು ಕೂಡ ಮೃತಪಟ್ಟಿದ್ದಾರೆ.

ನಿಜಾಮಾಬಾದ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದ ಡಾ.ಲಕ್ಷ್ಮಣ್‌ ಅವರ ಸಾವಿಗೆ ಇಡೀ ಆಸ್ಪತ್ರೆ ಕಂಬನಿ ಮಿಡಿದಿದೆ.

See also  ತಿರುಪತಿಯಲ್ಲಿ ಭಾರಿ ಮಳೆ: ದೇವಸ್ಥಾನದ ಮುಂದಿನ ಆದೇಶದ ವರೆಗೂ ಮಾರ್ಗಗಳು ಬಂದ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು