News Kannada
Friday, December 09 2022

ತೆಲಂಗಾಣ

ಹೈದರಾಬಾದ್‌: ವ್ಯಕ್ತಿಯ ದೇಹದಿಂದ 206 ಕಿಡ್ನಿ ಸ್ಟೋನ್ ಹೊರತೆಗೆದ ವೈದ್ಯರು!

Photo Credit : IANS

ಹೈದರಾಬಾದ್‌: ಇತ್ತೀಚೆಗೆ, ಹೈದರಾಬಾದ್‌ನ ವೈದ್ಯರ  ತಂಡವು 56 ವರ್ಷದ ರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿತು. ಈ ಶಸ್ತ್ರಚಿಕಿತ್ಸೆ ಸುಮಾರು ಒಂದು ಗಂಟೆಗಳ ಕಾಲ ನಡೆಯಿತು. ಹೈದರಾಬಾದ್‌ನ ‘ಅವೇರ್ ಗ್ಲೆನೀಗಲ್ ಗ್ಲೋಬಲ್ ಆಸ್ಪತ್ರೆ’ ವೈದ್ಯರು ಈ ಆಪರೇಷನ್ ಮಾಡಿದ್ದಾರೆ.

ನಲ್ಗೊಂಡ ನಿವಾಸಿ ವೀರಮಲ್ಲ ರಾಮಲಕ್ಷ್ಮಯ್ಯ ಎಂಬುವವರ ಕಿಡ್ನಿಯಲ್ಲಿದ್ದ 206 ಕಲ್ಲುಗಳನ್ನು ಕೀಹೋಲ್ ಸರ್ಜರಿ ಅಂದರೆ ಲೇಸರ್ ಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ವೀರಮಲ್ಲನಿಗೆ ಬಹಳ ದಿನಗಳಿಂದ ಹೊಟ್ಟೆನೋವುಇತ್ತು. ನೋವು ಬಂದಾಗ ಸ್ಥಳೀಯ ವೈದ್ಯರ ಸಲಹೆ ಪಡೆದು ಔಷಧಿ  ಸೇವಿಸುತ್ತಿದ್ದರು.ಕೆಲವು ಕಾಲ ನೋವು ವಾಸಿಯಾಗಿ ಮತ್ತೆ ಶುರುವಾಯಿತು. ಕ್ರಮೇಣ ಅವರ ಸ್ಥಿತಿ ಹದಗೆಡತೊಡಗಿತು. ಕೆಲಸ ಮಾಡಲು ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಅವರು ಶಸ್ತ್ರಚಿಕಿತ್ಸೆಗೆ  ಒಳಗಾಗಿದ್ದರು.

ಹೈದರಾಬಾದ್‌ನ ವೈದ್ಯರು ಒಂದು ಗಂಟೆಯ ಕೀಹೋಲ್ ಶಸ್ತ್ರಚಿಕಿತ್ಸೆಯ ನಂತರ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ನಲ್ಗೊಂಡ ನಿವಾಸಿಯಾಗಿರುವ ರೋಗಿಯು ಆರು ತಿಂಗಳಿನಿಂದ ಎಡ ಸೊಂಟದಲ್ಲಿ ತೀವ್ರವಾದ ನೋವಿನಿಂದ ಬಳಲುತ್ತಿದ್ದರು, ಈ ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಇದು ಮತ್ತಷ್ಟು ಉಲ್ಬಣಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೇಸಿಗೆ ಯಲ್ಲಿ ಹೆಚ್ಚಿನ ತಾಪಮಾನವು ನಿರ್ಜಲೀಕರಣಕ್ಕೆ ಕಾರಣವಾಗಬಹುದು ಮತ್ತು ಜನರಲ್ಲಿ ಮೂತ್ರಪಿಂಡದ ಕಲ್ಲುಗಳ ರಚನೆಗೆ ಕಾರಣವಾಗಬಹುದು ಎಂದು ವೈದ್ಯರು ಗಮನಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ, ಹೈಡ್ರೇಟೆಡ್ ಆಗಿರಲು ಜನರು ಹೆಚ್ಚು ನೀರು ಮತ್ತು ತೆಂಗಿನ ನೀರನ್ನು ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಜನರು ಬಿಸಿಲಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸುವುದು ಅಥವಾ ಕಡಿಮೆ ಮಾಡುವುದು ಮುಖ್ಯವಾಗಿದೆ ಮತ್ತು ನಿರ್ಜಲೀಕರಣವನ್ನು ಮತ್ತಷ್ಟು ಹೆಚ್ಚಿಸುವ ಸೋಡಾ ಪಾನೀಯಗಳನ್ನು ಸೇವಿಸಬೇಡಿ ಎಂದು ಅವರು ಹೇಳಿದರು.

See also  ಹಳಿಯಲ್ಲಿ ನಿಂತಿದ್ದವರ ಮೇಲೆ ಹರಿದ ರೈಲು: ಐವರು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು