ಹೈದರಾಬಾದ್, ಫೆ.1: ಹೈದರಾಬಾದ್ ನ ಕುಕಟ್ಪಲ್ಲಿ ಪ್ರದೇಶದಲ್ಲಿ ದಂಪತಿಗಳು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೆಂಕಟರಾವ್ ನಗರ ಕಾಲೋನಿಯಲ್ಲಿ ಸೋಮಿರೆಡ್ಡಿ (65) ಮತ್ತು ಮಂಜುಳಾ (58) ಮೃತ ದುರ್ದೈವಿಗಳು.
ಮಂಜುಳಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಸೋಮಿರೆಡ್ಡಿ ಕ್ರಿಮಿನಾಶಕ ಸೇವಿಸಿರಬಹುದು ಎಂದು ಶಂಕಿಸಲಾಗಿದೆ.
ಮಂಜುಳಾ ಅವರ ಸಹೋದರ ವೆಂಕಟ ರೆಡ್ಡಿ ಅವರು ಪದೇ ಪದೇ ಫೋನ್ ಕರೆ ಮಾಡಿದರೂ ಸ್ಪಂದಿಸದ ಕಾರಣ ಮಂಗಳವಾರ ತಡರಾತ್ರಿ ಅವರ ಮನೆಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ವೆಂಕಟ ರೆಡ್ಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಶವಗಳನ್ನು ಶವಪರೀಕ್ಷೆಗಾಗಿ ಸ್ಥಳಾಂತರಿಸಿ ತನಿಖೆ ಕೈಗೊಂಡಿದ್ದಾರೆ. ಅನಾರೋಗ್ಯದ ಕಾರಣ ದಂಪತಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ನಗರದ ಮಿಯಾಪುರ್ ಪ್ರದೇಶದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಕಿರಿಯ ಮಗ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ.