ಹೈದರಾಬಾದ್, ಮಾ.31: ಕೆಲಸದ ಒತ್ತಡ ಮತ್ತು ಕೆಲಸ ಕಳೆದುಕೊಳ್ಳುವ ಭೀತಿಯಿಂದ ಸಾಫ್ಟ್ ವೇರ್ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ನ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿನೋದ್ ಕುಮಾರ್ (32) ಅಲ್ಕಾಪುರ ಟೌನ್ಶಿಪ್ನಲ್ಲಿರುವ ತನ್ನ ಸಹೋದರನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಗುಂಟೂರು ಮೂಲದ ಈ ಟೆಕ್ಕಿ ಕಂಪನಿಯು ಪರಿಚಯಿಸಿದ ಕೆಲವು ಹೊಸ ಕೆಲಸದ ಮಾದರಿಯಿಂದ ಒತ್ತಡ ಪರಿಸ್ಥಿತಿ ಅನುಭವಿಸಿದ್ದರು. ಅಲ್ಲದೆ ಉದ್ಯೋಗ ಭದ್ರತೆ ಬಗ್ಗೆ ಚಿಂತಿತರಾಗಿದ್ದರು ಮತ್ತು ಕೆಲಸ ಕಳೆದುಕೊಳ್ಳುವ ಭಯವನ್ನು ತಮ್ಮ ಸಹೋದರನೊಂದಿಗೆ ಹಂಚಿಕೊಂಡಿದ್ದರು.
ವಿನೋದ್ ಕುಮಾರ್ ಇತ್ತೀಚೆಗೆ ಗುಂಟೂರಿನಲ್ಲಿ ಮನೆಯಿಂದ ಕೆಲಸ ಮಾಡುತ್ತಿದ್ದರು. ಆದರೆ ಕಚೇರಿಯಿಂದ ಕೆಲಸ ಮಾಡುವಂತೆ ಕಂಪನಿಯು ನಿರ್ದೇಶಿಸಿದ ನಂತರ, ಅವರು ಹೈದರಾಬಾದ್ ಗೆ ತೆರಳಿದ್ದರು. ಮತ್ತು ಅವರ ಸಹೋದರನೊಂದಿಗೆ ವಾಸಿಸುತ್ತಿದ್ದರು.
ಟೆಕ್ಕಿಯು ತನ್ನ ಸಹೋದರ ಮತ್ತು ಅವರ ಹೆಂಡತಿ ಹೊರಹೋದ ವೇಳೆ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.