News Kannada
Sunday, February 25 2024
ತೆಲಂಗಾಣ

ಪ್ಯಾರಾಗ್ಲೈಡಿಂಗ್ ವೇಳೆ ಕೆಳಗೆ ಬಿದ್ದು 26 ವರ್ಷದ ಯುವತಿ ಸಾವು

ಪ್ಯಾರಾಗ್ಲೈಡಿಂಗ್ ವೇಳೆ ಆಕಾಶದಿಂದ ಟೆರೇಸ್ ಮನೆಯ ಮಹಡಿ ಮೇಲೆ ಬಿದ್ದು 26 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆದಿದೆ.
Photo Credit : News Kannada

ಹೈದರಾಬಾದ್: ಪ್ಯಾರಾಗ್ಲೈಡಿಂಗ್ ವೇಳೆ ಆಕಾಶದಿಂದ ಟೆರೇಸ್ ಮನೆಯ ಮಹಡಿ ಮೇಲೆ ಬಿದ್ದು 26 ವರ್ಷದ ಯುವತಿ ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ನಡೆದಿದೆ. ಮೃತ ಯುವತಿ ತೆಲಂಗಾಣದ ಹೈದರಾಬಾದ್‌ನವರಾಗಿದ್ದು, ಹಿಮಾಚಲ ಪ್ರದೇಶದ ಮನಾಲಿಗೆ ಪ್ರವಾಸ ತೆರಳಿದ್ದರು. ಈ ವೇಳೆ ಪ್ಯಾರಾಗ್ಲೈಡಿಂಗ್‌ ಸಾಹಸದಲ್ಲಿ ಭಾಗವಹಿಸಿದ ವೇಳೆ ಈ ದುರಂತ ಸಂಭವಿಸಿದೆ.

ಮನಾಲಿಯ ಕುಲುನಲ್ಲಿ ಈ ದುರಂತ ಸಂಭವಿಸಿದ್ದು, ಪ್ಯಾರಾಗ್ಲೈಡಿಂಗ್ ಸಂಸ್ಥೆ ಹಾಗೂ ಆಕೆಯನ್ನು ಪ್ಯಾರಾಗ್ಲೈಡಿಂಗ್ ಕರೆದೊಯ್ದ ಪೈಲಟ್ ವಿರುದ್ಧ ಪ್ರಕರಣ ದಾಖಲಾಗಿದೆ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್‌ನ ನವ್ಯಾ ಸಾವನ್ನಪ್ಪಿದ ಯುವತಿ. ಮಧ್ಯ ಆಕಾಶದಲ್ಲಿ ಪ್ಯಾರಾಗ್ಲೈಡಿಂಗ್‌ನಲ್ಲಿ ಹಾರಾಡುತ್ತಿದ್ದ ವೇಳೆ ಹಿಡಿತ ತಪ್ಪಿ ಆಕೆ ಎತ್ತರದಿಂದ ಆರ್‌ಸಿಸಿ ಕಟ್ಟಡವೊಂದರ ಮಹಡಿ ಮೇಲೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪೈಲಟ್‌ನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಈ ಪ್ಯಾರಾಗ್ಲೈಡಿಂಗ್‌ಗೆ ಸಂಬಂಧಿಸಿದಂತೆ ಬಳಸಿದ ಉಪಕರಣ ಪರಿಶೀಲಿಸಲಾಗಿದ್ದು, ಅದು ಸರಿಯಾಗಿಯೇ ಇದು ಅವುಗಳನ್ನು ನೋಂದಾಯಿಸಿ ಅನುಮೋದಿಸಲಾಗಿತ್ತು. ಮಾನವ ಲೋಪದಿಂದ ಈ ಅನಾಹುತ ಸಂಭವಿಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸುನೈನಾ ಶರ್ಮಾ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು