NewsKarnataka
Wednesday, September 15 2021

ಉತ್ತರ ಪ್ರದೇಶ

ಉತ್ತರಪ್ರದೇಶದಲ್ಲಿ ಯೋಗಿ ಸರಕಾರ ಉತ್ತಮ ರೀತಿಯಲ್ಲಿ ನಡೆದುಕೊಂಡು ಬಂದಿದೆ

ಅಲಿಗಢ: ಅಲಿಗಢದಲ್ಲಿ ಬಹು ನಿರೀಕ್ಷಿತ ‘ರಾಜಾ ಮಹೇಂದ್ರ ಪ್ರತಾಪ್‌ ಸಿಂಗ್‌ ವಿಶ್ವವಿದ್ಯಾಲಯ’ಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘2017 ಕ್ಕಿಂತ ಮೊದಲು ಉತ್ತರ ಪ್ರದೇಶ ರಾಜ್ಯದಲ್ಲಿ ಮಾಫಿಯಾ ಮತ್ತು ಗ್ಯಾಂಗ್‌ಸ್ಟರ್‌ಗಳೇ ರಾಜ್ಯ ಆಳುತ್ತಿದ್ದರು.
ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಯೋಗಿ ಆದಿತ್ಯನಾಥ್‌ ಸರಕಾರದ ಗುಣಗಾನ ಮಾಡಿದರು.
ಈಗ ಯೋಗಿ ಆದಿತ್ಯನಾಥ್‌ ಆಡಳಿತದಲ್ಲಿ ಎಲ್ಲವೂ ಬದಲಾಗಿದ್ದು ದುಷ್ಟ ಶಕ್ತಿಗಳು ಕಂಬಿ ಎಣಿಸುವಂತಾಗಿದೆ. ರಾಜ್ಯದ ಅಭಿವೃದ್ಧಿಗೆ ಡಬಲ್‌ ಎಂಜಿನ್‌ ಶಕ್ತಿ ಪ್ರಾಪ್ತವಾಗಿದೆ ಎಂದು ಹೇಳಿದರು.

ಉತ್ತರ ಪ್ರದೇಶವು ಅಭಿವೃದ್ಧಿಯ ದೃಷ್ಟಿಯಿಂದ ಅತ್ಯುತ್ತಮ ರಾಜ್ಯ ಎನ್ನಿಸಿದೆ. ಡಬಲ್‌ ಎಂಜಿನ್‌ ಅಭಿವೃದ್ಧಿ ಎಂದರೆ ಏನು ಎಂದು ಕೇಳುವವರಿಗೆ ಇದು ಸೂಕ್ತ ನಿದರ್ಶನ ಒದಗಿಸುವ ರಾಜ್ಯವಾಗಿದೆ ಎಂದ ನರೇಂದ್ರ ಮೋದಿ, ಬಿಜೆಪಿ ಅಧಿಕಾರದೊಂದಿಗೆ ರಾಜ್ಯದಲ್ಲಿ ಸುಧಾರಣೆಯ ಪರ್ವ ಕಾಲ ಆರಂಭಗೊಂಡಿತು. ಅದಕ್ಕೂ ಹಿಂದೆ ಬಡವರಿಗಾಗಿ ಮೀಸಲಿಟ್ಟ ಯೋಜನೆಗಳಿಗೂ ಕಿಡಿಗೇಡಿಗಳು ಅಡ್ಡಿಪಡಿಸುತ್ತಿದ್ದರು. ಈಗ ಎಲ್ಲಾ ಯೋಜನೆಗಳೂ ನೇರ ಫಲಾನುಭವಿಗಳ ಮನೆ ತಲುಪುತ್ತಿವೆ’ ಎಂದು ಹೇಳಿದರು.

ಜಾಟ್‌ ಸಮುದಾಯದ ಪ್ರಭಾವಿ ನಾಯಕರೂ ಆಗಿದ್ದ ಮಹೇಂದ್ರ ಪ್ರತಾಪ್‌ ಸಿಂಗ್‌ ಹೆಸರಲ್ಲಿ ವಿವಿ ಸ್ಥಾಪನೆ ಹಿಂದೆ ಕೆಲವೇ ತಿಂಗಳಲ್ಲಿ ನಡೆಯುವ ಚುನಾವಣೆ ಲೆಕ್ಕಾಚಾರವೂ ಇದ್ದು, ಜಾಟ್ ಸಮುದಾಯದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಮಹೇಂದ್ರ ಪ್ರತಾಪ್‌ ಸಿಂಗ್‌ ಹೆಸರಲ್ಲಿ ವಿವಿ ಸ್ಥಾಪನೆಗೆ ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!