ಲಕ್ನೋ: ಕಳೆದ ವರ್ಷ ನೈಸರ್ಗಿಕ ವಿಕೋಪದಲ್ಲಿ ಬೆಳೆ ನಷ್ಟವನ್ನು ಎದುರಿಸಿದ ಉತ್ತರ ಪ್ರದೇಶದ 9,03,336 ರೈತರಿಗೆ ಪರಿಹಾರ ನೀಡಲು ಕೇಂದ್ರವು 462 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಬೆಳೆ ವಿಮಾ ಪೋರ್ಟಲ್ ಮೂಲಕ ಆರು ರಾಜ್ಯಗಳಿಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಒಟ್ಟು 1,260 ಕೋಟಿ ರೂಪಾಯಿ ಪರಿಹಾರವನ್ನು ಬಿಡುಗಡೆ ಮಾಡಿದರು.
ಮಧ್ಯಾವಧಿಯಲ್ಲಿ ಭಾಗಶಃ ಪರಿಹಾರವಾಗಿ 2.18 ಲಕ್ಷ ರೈತರಿಗೆ ವಿಮಾ ಕಂಪನಿಗಳಿಂದ ಈಗಾಗಲೇ 134.25 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ ತಿಳಿಸಿದ್ದಾರೆ. ಹೀಗಾಗಿ, 2022 ರ ಖಾರಿಫ್ ಹಂಗಾಮಿಗೆ ಪರಿಹಾರವಾಗಿ ಒಟ್ಟು 597.05 ಕೋಟಿ ರೂ.ಗಳನ್ನು ನೇರವಾಗಿ ರೈತರಿಗೆ ನೀಡಲಾಗಿದೆ. ಮೊತ್ತವನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ.