ಬಲರಾಂಪುರ: ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯ ಬಂಕತ್ವಾ ವಲಯದ ಸೊಹೆಲ್ವಾ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ದಾಳಿ ನಡೆಸಿ ನಾಲ್ವರನ್ನು ಗಾಯಗೊಳಿಸಿದೆ. ಗಾಯಗೊಂಡ ನಾಲ್ವರಲ್ಲಿ ಹದಿಹರೆಯದವರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿನ್ಹೋನಿ ಕಲಾ ಗ್ರಾಮದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, 15 ವರ್ಷದ ಕಿಶೋರಿ ಮೇಲೆ ಹೊಲದಲ್ಲಿ ಚಿರತೆ ದಾಳಿ ಮಾಡಿದೆ. ಚಿರತೆಯನ್ನು ಹೆದರಿಸಲು ಪ್ರಯತ್ನಿಸಿದ ನಂತರ ಇತರ ಮೂವರು ಗಾಯಗೊಂಡಿದ್ದಾರೆ.
ಚಿರತೆಯ ಚಲನವಲನಗಳನ್ನು ಪತ್ತೆಹಚ್ಚಲು ತಂಡಗಳನ್ನು ರಚಿಸಲಾಗಿದೆ ಎಂದು ಅರಣ್ಯ ಅಧಿಕಾರಿ ಎಸ್.ಮಾರನ್ ಎಂ.ಹೇಳಿದರು.
ಚಿರತೆಯನ್ನು ಪತ್ತೆಹಚ್ಚುವವರೆಗೂ ಅರಣ್ಯದಲ್ಲಿ ಏಕಾಂಗಿಯಾಗಿ ಹೊರಗೆ ಹೋಗದಂತೆ ಅರಣ್ಯ ಇಲಾಖೆ ಸ್ಥಳೀಯ ಗ್ರಾಮಸ್ಥರಿಗೆ ಸಲಹೆ ನೀಡಿದೆ ಎಂದು ಅವರು ಹೇಳಿದರು.