ಲಕ್ನೋ: ಉತ್ತರ ಪ್ರದೇಶದಲ್ಲಿ ಈ ವರ್ಷದ ಮೊದಲ ಕೋವಿಡ್ ಸಾವಿನ ಪ್ರಕರಣ ದಾಖಲಿಸಿದೆ ಎಂದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ 192 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ರಾಜಧಾನಿ ಲಕ್ನೋ ಸೇರಿದಂತೆ ರಾಜ್ಯದಲ್ಲಿ 68 ರೋಗಿಗಳು ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 842 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಏಪ್ರಿಲ್ 2 ರಂದು ಕೋವಿಡ್ ನಿಂದ ಮಹಿಳೆಯೊಬ್ಬರು ಗುರುವಾರ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಲಕ್ನೋದಲ್ಲಿ 35 ಜನರಿಗೆ ಕೋವಿಡ್ ದೃಢಪಟ್ಟಿದೆ. ಮೃತ ಮಹಿಳೆ ಲಕ್ನೋದ ವೃಂದಾವನ ಕಾಲೋನಿಯ ನಿವಾಸಿಯಾಗಿದ್ದು, ಅವರನ್ನು ಆಲಂಬಾಗ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.