News Kannada
Friday, February 23 2024
ಉತ್ತರ ಪ್ರದೇಶ

ಜನರಿಗೆ ಆಮಿಷ ಒಡ್ಡಿ ಮತಾಂತರ ಮಾಡುತ್ತಿದ್ದ 9 ಮಂದಿ ಅರೆಸ್ಟ್‌

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬಡವರು ಹಾಗೂ ಬುಡಕಟ್ಟು ಜನರಿಗೆ ಆಮಿಷ ಒಡ್ಡಿದ 9 ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
Photo Credit : News Kannada

ಉತ್ತರ ಪ್ರದೇಶ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬಡವರು ಹಾಗೂ ಬುಡಕಟ್ಟು ಜನರಿಗೆ ಆಮಿಷ ಒಡ್ಡಿದ 9 ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ ಮೂಲದ ಜೈಪ್ರಭು, ಉತ್ತರ ಪ್ರದೇಶದ ರಾಬರ್ಟ್ಸ್‌ಗಂಜ್‌ನ ಅಜಯ್ ಕುಮಾರ್, ಆಂಧ್ರಪ್ರದೇಶದ ವಿಜಯವಾಡದ ಚೆಕ್ಕಾ ಇಮ್ಯಾನುಯೆಲ್, ರಾಜೇಂದ್ರ ಕೋಲ್, ಛೋಟು ಅಲಿಯಾಸ್ ರಂಜನ್, ಪರಮಾನಂದ್, ಸೋಹನ್, ಪ್ರೇಮ್ ನಾಥ್ ಪ್ರಜಾಪತಿ ಮತ್ತು ರಾಮ್ ಪ್ರತಾಪ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳಿಂದ ಧಾರ್ಮಿಕ ಪುಸ್ತಕಗಳು, ಪ್ರಚಾರ ಸಾಮಗ್ರಿಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋನಭದ್ರಾ ಚೋಪಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಹಿಯಾ ಟೋಲಾ ನಿವಾಸಿ ನರಸಿಂಗ್ ಎಂಬುವರು ಬುಡಕಟ್ಟು ಜನರು ಮತ್ತು ಬಡವರಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಮಿಷ ಒಡ್ಡುತ್ತಿದ್ದಾರೆ ಎಂದು ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ, ಉತ್ತರ ಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆಯಡಿ 42 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು