ರಾಮ್ಪುರ: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಇಬ್ಬರು ಹುಡುಗರು ಸ್ಕೂಟಿಯಲ್ಲಿ ಸಾಗುತ್ತಿರುವ ವೇಳೆ ಪರಸ್ಪರ ಚುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ದ್ವಿಚಕ್ರ ವಾಹನದ ಮೇಲೆ ಸವಾರಿ ಮಾಡುವಾಗ ಇಬ್ಬರು ಹುಡುಗರು ಪರಸ್ಪರ ಚುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಾಂಪುರ ಪೊಲೀಸರು, ಈ ವಿಷಯವನ್ನು ಪರಿಶೀಲಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟನಲ್ಲಿ ಪೊಲೀಸರು ಹೀಗೆ ವಿವರಣೆ ನೀಡಿದ್ದಾರೆ. ಸಂಚಾರ ಇಲಾಖೆಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ತಮಿಳುನಾಡಿನ ಇಬ್ಬರು ಹುಡುಗಿಯರು ಬೈಕ್ನಲ್ಲಿ ಚಲಿಸುವಾಗ ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸುತ್ತಿದ್ದ ದೃಶ್ಯ ವೈರಲ್ ಆಗಿತ್ತು. ಇತ್ತೀಚೆಗಷ್ಟೇ, ಲಕ್ನೋದಲ್ಲಿ ಯುವ ಜೋಡಿಯೊಂದು ಮೋಟಾರು ಬೈಕ್ನಲ್ಲಿ ಸಾಗುತ್ತಿರುವಾಗ ಚುಂಬಿಸುತ್ತಿರುವ ವಿಡಿಯೋ ಕ್ಲಿಪ್ ಜಾಲತಾಣದಲ್ಲಿ ವಿಪರೀತ ವೈರಲ್ ಆಗಿತ್ತು.