News Kannada
Monday, February 26 2024
ಉತ್ತರ ಪ್ರದೇಶ

ಕೆಜಿಎಂಯುನಲ್ಲಿ ನಕಲಿ ದಾಖಲೆಗಳೊಂದಿಗೆ ಸಿಕ್ಕಿಬಿದ್ದ ಅಭ್ಯರ್ಥಿ

Candidate caught with fake documents at KGMU
Photo Credit : IANS

ಲಕ್ನೋ: ನೀಟ್ ಯುಜಿ 2023ರ ಕೌನ್ಸೆಲಿಂಗ್ ವೇಳೆ ನಕಲಿ ಅಂಕಪಟ್ಟಿ, ಹಂಚಿಕೆ ಪತ್ರ ಮತ್ತು ಇತರ ದಾಖಲೆಗಳೊಂದಿಗೆ ಎಂಬಿಬಿಎಸ್‌ ಗೆ  ಪ್ರವೇಶ ಕೋರಿದ್ದ ಅಭ್ಯರ್ಥಿಯನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ ಗಳ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ನಡೆಯುತ್ತಿದ್ದು,  ಈ ವೇಳೆ ಅಂಕಪಟ್ಟಿ ಹಾಜರುಪಡಿಸಿದ್ದು,  ಜೊತೆಗೆ ವೈದ್ಯಕೀಯ ಕಾಲೇಜಿಗೆ ಹಂಚಿಕೆ ಪತ್ರವನ್ನು ಸಹ ಹಾಜರುಪಡಿಸಿದ್ದರು.  ಆದರೆ ಅಂಕಪಟ್ಟಿ ಮತ್ತು ಹಂಚಿಕೆ ಪತ್ರ ನಕಲಿ ಎಂಬುದು ದೃಢಪಟ್ಟಿತ್ತು. ಅಲ್ಲದೆ ಅಭ್ಯರ್ಥಿಗೆ  ಯಾವುದೇ ಕಾಲೇಜಿನಲ್ಲಿ ಸೀಟು ನೀಡಲಾಗಿಲ್ಲ ಎಂಬುದನ್ನು ಕಂಡುಕೊಂಡಿದ್ದರು.  ನಕಲಿ ದಾಖಲೆಗಳ ಬಗ್ಗೆ ತಂಡವು ಅಭ್ಯರ್ಥಿಯನ್ನು ಪ್ರಶ್ನಿಸಿತು, ಆದರೆ ಅವರು ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು