News Karnataka Kannada
Wednesday, April 24 2024
Cricket
ಉತ್ತರ ಪ್ರದೇಶ

ಲಕ್ನೋ: ಕಳೆದ 24 ಗಂಟೆಗಳಲ್ಲಿ ಕೋವಿಡ್‌ನಿಂದ ನಾಲ್ವರು ಸಾವು

Lucknow: Four people die of Covid-19
Photo Credit : IANS

ಲಕ್ನೋ: ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಾಲ್ಕು ಕೋವಿಡ್ -19 ಸಾವುಗಳು ವರದಿಯಾಗಿದ್ದು, ಲಕ್ನೋ, ಮೀರತ್, ಆಗ್ರಾ ಮತ್ತು ಸುಲ್ತಾನ್‌ಪುರದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಲಕ್ನೋದಿಂದ 59 ಸೇರಿದಂತೆ ರಾಜ್ಯಾದ್ಯಂತ 462 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ರಾಜ್ಯಾದ್ಯಂತ 716 ರೋಗಿಗಳು ಚೇತರಿಸಿಕೊಂಡಿದ್ದಾರೆ. ಲಕ್ನೋದಲ್ಲಿ, ಶನಿವಾರ ಸಾವನ್ನಪ್ಪಿದ 34 ವರ್ಷದ ಕೋವಿಡ್-ಪಾಸಿಟಿವ್ ಮಹಿಳೆಯನ್ನು ಹೈಪೋಥೈರಾಯ್ಡಿಸಮ್‌ ಲಕ್ಷಣದೊಂದಿಗೆ ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ.

ಇದಕ್ಕೂ ಮುನ್ನ ಏಪ್ರಿಲ್ 15 ರಂದು, ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಗೆ ದಾಖಲಾಗಿದ್ದ 68 ವರ್ಷದ ಕೋವಿಡ್-ಪಾಸಿಟಿವ್ ಪುರುಷ ರೋಗಿಯು ಸಾವನ್ನಪ್ಪಿದ್ದರು. ಲಕ್ನೋದಲ್ಲಿ ಕೋವಿಡ್-ಪಾಸಿಟಿವ್ ರೋಗಿಗಳಲ್ಲಿ ಒಟ್ಟು ಸಾವಿನ ಸಂಖ್ಯೆ 2,705 ಕ್ಕೆ ತಲುಪಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು