News Kannada
Monday, December 05 2022

ಉತ್ತರಖಂಡ

ಉತ್ತರಾಖಂಡ್​ನ ನೂತನ ಸ್ಪೀಕರ್​ ಆಗಿ ರಿತು ಖಂಡೂರಿ ಭೂಷಣ್​​ ನೇಮಕ

Photo Credit :

ಉತ್ತರಾಖಂಡ್​ನ ನೂತನ ಸ್ಪೀಕರ್ ಆಗಿ ರಿತು ಖಂಡೂರಿ ಭೂಷಣ್​​ ನೇಮಕವಾಗಿದ್ದಾರೆ. ಅವರು ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉತ್ತರಾಖಂಡ್​ ಇತಿಹಾಸದಲ್ಲಿಯೇ ಮೊದಲ ಮಹಿಳಾ ಸ್ಪೀಕರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಉತ್ತರಾಖಂಡದ ಕೋಟ್‌ದ್ವಾರ ವಿಧಾನಸಭೆ ಕ್ಷೇತ್ರದ ಶಾಸಕಿಯಾಗಿದ್ದರು. ರಿತು ಅವರು ಗುರುವಾರ ಡೆಹ್ರಾಡೂನ್​​ನಲ್ಲಿ ಮುಖ್ಯಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ಮತ್ತು ಇತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ವಿಧಾನಸಭೆ ಕಾರ್ಯದರ್ಶಿ ಮುಖೇಶ್ ಸಿಂಘಾಲ್​ಗೆ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಉತ್ತರಾಖಂಡ್​ ವಿಧಾನಸಭೆ ಅಧ್ಯಕ್ಷರಾಗಿ ನೇಮಕವಾಗುತ್ತಿದ್ದಂತೆ ಟ್ವೀಟ್ ಮಾಡಿರುವ ರಿತು, ಬಿಜೆಪಿ ಸದಸ್ಯರು ಮತ್ತು ಪ್ರತಿಪಕ್ಷಗಳ ನಾಯಕರಿಗೆ ನನ್ನ ಧನ್ಯವಾದಗಳು.

ಸಂಸದೀಯ ಸಂಪ್ರದಾಯ ಮತ್ತು ಪರಿಕಲ್ಪನೆಗಳನ್ನು ಪೂರೈಸಲು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರಾಖಂಡ್​​ನ ಮೊದಲ ಮಹಿಳಾ ಸ್ಪೀಕರ್​ ಆಗಿ ನಾನು ನೇಮಕಗೊಳ್ಳುತ್ತಿರುವುದು ಬರೀ ನನಗಷ್ಟೇ ಹೆಮ್ಮೆಯ ವಿಚಾರವಲ್ಲ, ಇಡೀ ಉತ್ತರಾಖಂಡ್​ ಪಾಲಿಗೇ ಹೆಮ್ಮೆ ಎಂದು ಹೇಳಿದ್ದಾರೆ.

See also  ಪಂಚ ರಾಜ್ಯಗಳ ಚುನಾವಣೆ: ಬಿಜೆಪಿಯಿಂದ ಉತ್ತರಾಖಂಡ್‌, ಗೋವಾದ ಅಭ್ಯರ್ಥಿಗಳ ಪಟ್ಟಿ ರಿಲೀಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು