News Kannada
Thursday, September 29 2022

ಪಶ್ಚಿಮ ಬಂಗಾಳ

ಬರ್ಧಮಾನ್: ಬಾಯ್ ಫ್ರೆಂಡ್‌ನ ಮೇಲೆ ಗುಂಡು ಹಾರಿಸಿದ ಯುವತಿ - 1 min read

Photo Credit :

ಬರ್ಧಮಾನ್ : 22 ವರ್ಷದ ಯುವತಿಯೊಬ್ಬಳು ತನ್ನ ನಾಲ್ಕು ವರ್ಷಗಳ ಬಾಯ್ ಫ್ರೆಂಡ್‌ನ ಮೇಲೆ ಗುಂಡು ಹಾರಿಸಿದ ಘಟನೆ ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ನಡೆದಿದೆ.

ಬುಧವಾರ ರಾತ್ರಿ ಕಟ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಕೇಶಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಲಸದ ನಿಮಿತ್ತ ಜಾರ್ಖಾಂಡ್’ಗೆ ತೆರಳಿದ್ದೆ. ಮರಳಿ ಊರಿಗೆ ಬಂದಾಗ ಭೇಟಿ ಮಾಡಬೇಕೆಂದು ಹೇಳಿದ ನನ್ನ ಗೆಳತಿ ಸರ್ಕಸ್ ಮೈದಾನಕ್ಕೆ ಬರುವಂತೆ ತಿಳಿಸಿದ್ದಳು.

ಈ ವೇಳೆ ಸ್ಥಳಕ್ಕೆ ಹೋದಾಗ ತಬ್ಬಿಕೊಂಡು, ಪ್ರೀತಿಯಿಂದ ಚುಂಬಿಸಿದ್ದಳು. ಇಬ್ಬರೂ ಸಿಗರೇಡ್ ಸೇದಿದ್ದೆವು. ಬಳಿಕ ನನ್ನ ತಳ್ಳಿದ ಆಕೆ ಇದ್ದಕ್ಕಿದ್ದಂತೆಯೇ ಪಿಸ್ತೂಲು ತೆಗೆದು ಗುಂಡಿನ ದಾಳಿ ನಡೆಸಿದರು ಎಂದು ಯುವಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾನೆ.

ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ವೇಳೆ ಯುವಕ ಕೂಗಾಡಿದ್ದು, ಹೆದರಿದ ಯುವತಿ ಸ್ಥಳದಿಂದ ಕಾಲ್ಕಿತ್ತಿದ್ದಾಳೆಂದು ತಿಳಿದುಬಂದಿದೆ.

ಘಟನೆ ಬಳಿಕ ದೂರು ದಾಖಲಿಸಿಕೊಂಡಿರುವ ಪೊಲೀಸರು ಯುವತಿಯನ್ನು ಬಂಧನಕ್ಕೊಳಪಡಿಸಿದ್ದು, ಪಿಸ್ತೂಲು ಹಾಗೂ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ ಇಬ್ಬರ ನಡುವೆ ಅಂತರ ತೀವ್ರಗೊಂಡ ಹಿನ್ನೆಲೆಯಲ್ಲಿ ಬೇಸತ್ತು ಯುವತಿ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ.

See also  ಉತ್ತರ ಪ್ರದೇಶ:‌ ಅಖಿಲೇಶ್‌ ಯಾದವ್‌ ಪರ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು