News Kannada
Saturday, February 24 2024
ವಿದೇಶ

ಭಾರತ- ಯುರೋಪ್ ಆರ್ಥಿಕ ಕಾರಿಡಾರ್ “ಆಶೀರ್ವಾದ” ಎಂದ ಇಸ್ರೇಲ್‌ ಪ್ರಧಾನಿ

Israel PM calls India-Europe economic corridor a "blessing"
Photo Credit : News Kannada

ವಿಶ್ವಸಂಸ್ಥೆ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶುಕ್ರವಾರ ಭಾರತ- ಯುರೋಪ್ ಆರ್ಥಿಕ ಕಾರಿಡಾರ್ ಅನ್ನು “ಆಶೀರ್ವಾದ” ಎಂದು ಶ್ಲಾಘಿಸಿದ್ದಾರೆ. ಇದರಿಂದ 2 ಶತಕೋಟಿ ಜನರಿಗೆ ಬಹು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ನಮಗೆ ಆಶೀರ್ವಾದ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಜೋ ಬಿಡೆನ್ ಅವರು ಘೋಷಿಸಿದ “ದೂರದೃಷ್ಟಿಯ ಕಾರಿಡಾರ್ ಯೋಜನೆ ಜಗತ್ತಿನ ಪ್ರತಿಯೊಬ್ಬರಿಗೂ ಅನುಕೂಲಕರ ಎಂದು ಹೇಳಿದರು.

ಈ ಯೋಜನೆ ಭಾರತವನ್ನು ಸಮುದ್ರ ಸಂಪರ್ಕ, ರೈಲು, ಇಂಧನ ಪೈಪ್‌ಲೈನ್‌ಗಳು, ಫೈಬರ್ ಆಪ್ಟಿಕ್ ಕೇಬಲ್‌ಗಳೊಂದಿಗೆ ಯುರೋಪ್‌ಗೆ ಸಂಪರ್ಕಿಸುತ್ತದೆ. ಸರಕುಗಳು, ಸಂವಹನ ಮತ್ತು ಶಕ್ತಿಯ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದರು.

“ಶಾಂತಿಯ ಸೇತುವೆ” ಈ ಯೋಜನೆ ಮೂಲಕ ಇಸ್ರೇಲ್ ಪ್ರಯೋಜನ ಪಡೆಯುತ್ತದೆ ಎಂದರು. ಈ ಕಾರಿಡಾರ್‌ ಯೋಜನೆಯಿಂದ ಇಸ್ರೇಲ್ ಮತ್ತು ಅದರ ಅರಬ್ ರಾಷ್ಟ್ರಗಳ ನಡುವಿನ ಸಂಬಂಧವನ್ನು ತಿಳಿಗೊಳ್ಳುತ್ತದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು