ಮಂಗಳೂರು: ಮೇ ೨೩ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾ ಭೇಟಿ ನೀಡಲಿದ್ದು, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಗಳೂರಿನ ಬಿಜೈ ಕಾಪಿಕಾಡ್ ನಿವಾಸಿ ಅನಿಶಾ ಪೂಜಾರಿ ಅವರು ನೃತ್ಯ ಪುದರ್ಶನ ನೀಡಲಿದ್ದಾರೆ. ಅನಿಶಾ ಅವರನ್ನೊಳಗೊಂಡ ‘ನಾಟೋಕ್ತಿ’ ನೃತ್ಯ ತಂಡವು ತುಳು ಜಾನಪದ ಮತ್ತು ಕಾಂತಾರ ಚಿತ್ರಗೀತೆಗಳಿಗೆ ನೃತ್ಯ ಪುದರ್ಶನ ನೀಡಲಿದೆ.
ಅನಿಶಾ ಅವರು ಮಂಗಳೂರಿನ ಎಸ್ಡಿಎಂ ಕಾಲೇಜಿನಲ್ಲಿ ಎಂಬಿಎ ಪೂರ್ಣಗೊಳಿಸಿದ್ದು, ಆಸ್ಟ್ರೇಲಿಯಾದ ಪ್ರತಿಷ್ಠಿತ ಟೆಲಿಕಾಂ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಈಕೆ ಬಿಜೈ ಕಾಪಿಕಾಡ್ನ ಪದ್ಮನಾಭ ಪೂಜಾರಿ ಮತ್ತು ರೂಪ ದಂಪತಿಯ ಪುತ್ರಿ.