News Karnataka Kannada
Friday, April 19 2024
Cricket
ವಿದೇಶ

ಅಮೆರಿಕ ಜಂಟಿ ಕಾಂಗ್ರೆಸ್‌ ಸದನ ಉದ್ದೇಶಿಸಿ ಮಾತನಾಡುವರೇ ಮೋದಿ

Pm Modi to address US Joint Congress
Photo Credit : News Kannada

ವಾಷಿಂಗ್ಟನ್: ಮುಂಬರುವ ಜೂನ್‌ನಲ್ಲಿ ಪ್ರಧಾನಿ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಹೌಸ್‌ ರೆಪ್ರಸೆಂಟಿಟೀವ್ಸ್‌ ಉದ್ದೇಶಿಸಿ ಮಾತನಾಡುವಂತೆ ಹಲವು ಅಮೆರಿಕ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ.

“ಜೂನ್ 22, 2023 ರಂದು ಅಮೆರಿಕ ಅಧ್ಯಕ್ಷ ಬಿಡೆನ್ ಅವರು ಪ್ರಧಾನಿ ಮೋದಿ ಅವರನ್ನು ಅಧಿಕೃತ ಭೇಟಿಗಾಗಿ ದೇಶಕ್ಕೆ ಆಹ್ವಾನಿಸಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕನಿಗೆ ಗೌರವ ನೀಡುವುದು ಕರ್ತವ್ಯ. ಅದೇರೀತಿ 21 ನೇ ಶತಮಾನದಲ್ಲಿ ಚೀನಾವನ್ನು ಎದುರಿಸಲು ಅತ್ಯಂತ ನಿರ್ಣಾಯಕ ಪಾಲುದಾರ ಈ ನಿಟ್ಟಿನಲ್ಲಿ ಭಾಷಣ ಭಾರತ ಅಮೆರಿಕ ಸ್ನೇಹಕ್ಕೆ ಹೊಸ ಭಾಷ್ಯ ಬರೆಯಲಿದೆ ಎಂದು ಅಮೆರಿಕ ಡೆಮೊಕ್ರಟಿಕ್‌ ಪಕ್ಷದ ರೋ ಖನ್ನಾ, ರಿಪಬ್ಲಿಕನ್ ಪಕ್ಷದ ಜೇಮ್ಸ್ ವಾಲ್ಟ್ಜ್ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಜಂಟಿ ಪತ್ರದಲ್ಲಿ ಬರೆದಿದ್ದಾರೆ.

“ಕಾಂಗ್ರೆಸ್‌ಗೆ ಜಂಟಿ ಭಾಷಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವುದು ಯುಎಸ್ ಮತ್ತು ಭಾರತದ ನಡುವಿನ ಆಳವಾದ ಸ್ನೇಹವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ನಾವು ದೃಢವಾಗಿ ನಂಬುತ್ತೇವೆ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಭಾರತೀಯ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಈ ಹಿಂದೆ ಔತಣಕೂಟ ಆಯೋಜಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು