News Karnataka Kannada
Thursday, April 25 2024
Cricket
ವಿದೇಶ

‘ಆಪರೇಷನ್ ಬ್ಲೂಸ್ಟಾರ್’ : ಕೆನಾಡದಲ್ಲಿ ಮಾಜಿ ಪ್ರಧಾನಿ ಇಂದಿರಾ ಹತ್ಯೆ ಟ್ಯಾಬ್ಲೊ ರಚನೆ

Tableau depicting Indira Gandhi's assassination showcased in Canada
Photo Credit :

ಚಂಡೀಗಢ: ‘ಆಪರೇಷನ್ ಬ್ಲೂಸ್ಟಾರ್’ ನ 39 ನೇ ವರ್ಷಾಚರಣೆ ವೇಳೆಯೇ ಕೆನಡಾದ ಪಂಜಾಬಿಗರ ಪ್ರಾಬಲ್ಯವಿರುವ ಬ್ರಾಂಪ್ಟನ್‌ನಲ್ಲಿ ಸಿಖ್ ಅಂಗರಕ್ಷಕರಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಬಿಂಬಿಸುವ ಟ್ಯಾಬ್ಲೋವನ್ನು ಪ್ರದರ್ಶಿಸಲಾಗಿದೆ.
ಮಾಜಿ ಪ್ರಧಾನಿ ಇಂದಿರಾ ಹತ್ಯೆಯನ್ನು ಬಿಂಬಿಸುವ ಟ್ಯಾಬ್ಲೋ ಇರಿಸಲಾಗಿದ್ದು, ಖಲಿಸ್ತಾನ್ ಧ್ವಜಗಳ ಪೋಸ್ಟರ್‌ ಅಂಟಿಸಲಾಗಿದೆ. ಆಪರೇಷನ್ ಬ್ಲೂಸ್ಟಾರ್’ಗೆ ಇಂದಿರಾ ಹತ್ಯೆ ಸೇಡಿನ ಕ್ರಮ ಎಂದು ಪೋಸ್ಟರ್‌ಗಳಲ್ಲಿ ಹೇಳಲಾಗಿದೆ.

1984 ರ ಜೂನ್ 1 ಮತ್ತು 8 ರ ನಡುವೆ ಅಮೃತಸರದಲ್ಲಿ ನಡೆದ ಭಾರತೀಯ ಸೇನೆಯ ‘ಆಪರೇಷನ್ ಬ್ಲೂಸ್ಟಾರ್’ನಲ್ಲಿ ಹಲವರು ಸಾವನಪ್ಪಿದ್ದರು. ಅಮೃತಸರದ ಗೋಲ್ಡನ್ ಟೆಂಪಲ್ ಮತ್ತು ಅದರ ಸಂಕೀರ್ಣಕ್ಕೆ ಹಾನಿಯಾಗಿತ್ತು. ಪ್ರತ್ಯೇಕತಾವಾದಿ ಉಗ್ರ ಜರ್ನೈಲ್ ಸಿಂಗ್ ಭಿಂದ್ರವಾಲೆ ನೇತೃತ್ವದ ಗುಂಪನ್ನು ಮಟ್ಟಹಾಕಲು ಅಂದಿನ ಪ್ರಧಾನಿ ಇಂದಿರಾ ಮಿಲಿಟರಿ ಕಾರ್ಯಾಚರಣೆಗೆ ಆದೇಶ ನೀಡಿದ್ದರು.
ಕೆನಾಡದಲ್ಲಿ ಈ ಹಿಂದೆ ಬ್ರಾಂಪ್ಟನ್ ಪ್ರಾಂತ್ಯದಲ್ಲಿ ‘ಭಾರತ ವಿರೋಧಿ’ ಗೀಚುಬರಹದೊಂದಿಗೆ ದೇವಾಲಯವೊಂದನ್ನು ಧ್ವಂಸ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಗೌರಿ ಶಂಕರ ದೇವಸ್ಥಾನದ ಮೇಲಿನ ದಾಳಿಯನ್ನು ಖಂಡಿಸಿ ಹೇಳಿಕೆ ನೀಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು