ವಾಷಿಂಗ್ಟನ್ : ಜಗತ್ತಿಗೆ ಮಾರಕವಾಗಿರುವ ಕೊರೋನಾ ವೈರಸ್ ಮೂಲದ ಕುರಿತ ಗಂಭೀರ ವಿಚಾರವನ್ನು ಚೀನಾ ಮುಚ್ಚಿಟ್ಟಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆರೋಪಿಸಿದ್ದಾರೆ .
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಬೈಡನ್, ‘ಕೋವಿಡ್–19ರ ಉಗಮದ ಬಗೆಗಿನ ನಿರ್ಣಾಯಕ ಮಾಹಿತಿಯನ್ನು ಚೀನಾ ಮುಚ್ಚಿಡುತ್ತಿದೆ. ಚೀನಾದ ಬಳಿ ಕೋವಿಡ್ ಉಗಮದ ಬಗ್ಗೆ ನಿರ್ಣಾಯಕ ಮಾಹಿತಿ ಲಭ್ಯವಿದೆ. ಆದರೂ, ಆರಂಭದಿಂದಲೇ ಚೀನಾದ ಸರ್ಕಾರಿ ಅಧಿಕಾರಿಗಳು ಅಂತeರಾಷ್ಟ್ರೀಯ ತನಿಖಾಧಿಕಾರಿಗಳು ಮತ್ತು ಜಾಗತಿಕ ಸಾರ್ವಜನಿಕ ಆರೋಗ್ಯ ಸಮುದಾಯದ ಸದಸ್ಯರುಗಳಿಗೆ ಆ ಮಾಹಿತಿ ಸಿಗದಂತೆ ತಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೋವಿಡ್ನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಿದ್ದರೂ ಚೀನಾ, ಪಾರದರ್ಶಕತೆಯನ್ನು ತಿರಸ್ಕರಿಸುತ್ತಿದೆ. ಮಾಹಿತಿಯನ್ನು ತಡೆ ಹಿಡಿಯುತ್ತಿದೆ. ಕೊರೊನಾ ಉಗಮಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡುವಂತೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಗೆ ಸಹಕರಿಸುವಂತೆ ಮಿತ್ರ ರಾಷ್ಟ್ರಗಳೊಂದಿಗೆ ಸೇರಿ ಚೀನಾದ ಮೇಲೆ ಅಮೆರಿಕ ಒತ್ತಡ ಹೇರಲಿದೆ ಎಂದು ಬೈಡನ್ ಹೇಳಿದ್ದಾರೆ. |
|
ಚೀನಾದ ಮೇಲೆ ಕಿಡಿಕಾರಿದ ವಿಶ್ವದ ದೊಡ್ಡಣ್ಣ

Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.