News Kannada
Monday, December 05 2022

ವಿದೇಶ

ದೇಶದ ಶ್ರೀಮಂತರಿಗೆ ತಮ್ಮ ಆಸ್ತಿ ಹಂಚುವಂತೆ ನೋಟಿಸ್ ನೀಡಿದ ಚೀನಾ ಸರ್ಕಾರ

Photo Credit :

ಬೀಜಿಂಗ್ : ಮೊದಲಿನಿಂದಲೂ ಕಮ್ಯುನಿಸ್ಟ್ ತತ್ವ ಅನುಸರಿಸುತ್ತ ಬಂದ ಚೀನಾ ಇದೀಗ  ಶ್ರೀಮಂತರ ಆದಾಯಕ್ಕೆ ನಿರ್ಬಂಧ ಮತ್ತು ಅದನ್ನು ಮರುಹಂಚುವ ಸಂಬಂಧ ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಶ್ರೀಮಂತರಿಗೆ ನೋಟಿಸ್ ಕಳಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

2012ರಲ್ಲಿ ಆಡಳಿತ ಚುಕ್ಕಾಣಿ ವಹಿಸಿಕೊಂಡ ಶಿ ಜಿನ್ ಪಿಂಗ್ ಅಂದಿನಿಂದಲೂ ದೇಶದಿಂದ ಬಡತನ ನಿರ್ಮೂಲನ ಮಾಡುವುದಾಗಿ ಘೋಷಿಸಿಕೊಂಡೇ ಬಂದಿದ್ದರು. ಆ ಮೂಲಕ ಸಮೃದ್ಧ ಸಮಾಜ ನಿರ್ಮಾಣ ಮಾಡುವುದು ತನ್ನ ಗುರಿಯೆಂದು ಅವರು ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ, ಬಡವರು ಇನ್ನಷ್ಟು ಬಡವರಾಗುತ್ತಲೇ ಇರುವ ಪರಿಸ್ಥಿತಿ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು. ಸಮಾಜದಲ್ಲಿ ಸಮತೋಲನ ತರುವ ಉದ್ದೇಶದಿಂದ ಜಿನ್ ಪಿಂಗ್ ಸರ್ಕಾರ ಹಲವು ಕ್ರಮಗಳನ್ನು ಈ ಹಿಂದೆಯೂ ಕೈಗೊಂಡಿತ್ತು. ತನ್ನದೇ ದೇಶದ ಉದ್ಯಮಪತಿಗಳ ವಿರುದ್ಧ ಸಮರ ಸಾರಿತ್ತು. ಅದಕ್ಕೊಂದು ಒಳ್ಲೆಯ ಉದಾಹರಣೆಯೆಂದರೆ ಆಲಿಬಾಬ ಸ್ಥಾಪಕ ಜಾಕ್ ಮಾ.

ಚೀನಾ ಸರ್ಕಾರದ ವಿರೋಧ ಕಟ್ಟಿಕೊಂಡ ಜಾಕ್ ಮಾ ಕೋಟ್ಯಂತರ ರೂ. ಗಳನ್ನು ನಷ್ಟಗೊಳಿಸಿಕೊಂಡಿದ್ದ. ದೇಶದ ಶ್ರೀಮಂತರ ಪಟ್ಟಿಯಿಂದ ಕೆಳಕ್ಕಿಳಿದಿದ್ದ. ಕಳೆದ ವರ್ಷಗಳಲ್ಲಿ ಶ್ರೀಮಂತ ಉದ್ಯಮಪತಿಗಳ ಐಷಾರಾಮಿ ಬದುಕಿನ ಬಗ್ಗೆ ದೇಶದಲ್ಲಿ ವ್ಯಾಪಕ ಚರ್ಚೆಗಳಾಗಿದ್ದವು. ಸೆಲಬ್ರಿಟಿ ಜೀವನದ ವಿರುದ್ಧ ಜನಸಾಮಾನ್ಯರು ದನಿಯೆತ್ತಿದ್ದರು.

ಇದೀಗ ಹೆಚ್ಚು ಆದಾಯವನ್ನು ಗಳಿಸುತ್ತಿರುವವರನ್ನು ಸರ್ಕಾರದ ಕಣ್ಗಾವಲಿನ ವ್ಯಾಪ್ತಿಗೆ ತರಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಗ್ಗೆ ಮಂಗಳವಾರ ನಡೆದ ಸಭೆಯಲ್ಲಿ ಚರ್ಚೆಯಾಗಿತ್ತು ಎನ್ನುವುದು ಗಮನಾರ್ಹ. ಅಲತೆಗೂ ಮೀರಿ ಆದಾಯ ಗಳಿಸುತ್ತಿರುವವರನ್ನು ನಿರ್ಬಂಧಕ್ಕೊಳಪಡಿಸಿ ಅವರ ಸಂಪತ್ತಿನ ಒಂದಷ್ಟು ಭಾಗ ಸಮವಾಗಿ ಹಂಚಿಕೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ

See also  ಕ್ವಾಡ್ ಸದಸ್ಯರಿಗೆ ಉಡುಗೊರೆ ನೀಡಿದ ಮೋದಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು