NewsKarnataka
Monday, January 17 2022

ವಿದೇಶ

ಪಾಕಿಸ್ತಾನ್ ದ ಸೆರೆವಾಸದಿಂದ ಮುಕ್ತಾರಾದ ಇಬ್ಬರು ಭಾರತೀಯರು

ಲಾಹೋರ್ : ಅಕ್ರಮ ಗಡಿ ಪ್ರವೇಶಿಸಿದ ಹಿನ್ನೆಲೆಯಲ್ಲಿ 8 ವರ್ಷಗಳ ಕಾಲ ಜೈಲು ವಾಸ ಅನುಭವಿಸಿದ್ದ ಇಬ್ಬರು ಭಾರತೀಯರನ್ನು ಸೋಮವಾರ ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಅಠಾರಿ-ವಾಘಾಗಡಿ ಮೂಲಕ ಗಡಿ ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ.

2013ರಲ್ಲಿ ಶರ್ಮಾ ರಜಪೂತ್ ಹಾಗೂ ರಾಮ್ ಬುಹದಾರ್ ಎಂಬುವವರು ಕಾಶ್ಮೀರದ ಮೂಲಕ ಪಾಕಿಸ್ತಾನ ಗಡಿ ದಾಟಿ ಹೋಗಿದ್ದಾರೆ. ಈ ವೇಳೆ ಪಾಕಿಸ್ತಾನದ ಪಡೆಗಳು ಇಬ್ಬರನ್ನೂ ಬಂಧನಕ್ಕೊಳಪಡಿಸಿದ್ದರು. ಈ ವೇಳೆ ಇಬ್ಬರೂ ಮಾನಸಿಕ ಅಸ್ವಸ್ಥರೆಂದು ತಿಳಿದುಬಂದಿತ್ತು. ವ್ಯಕ್ತಿಗಳ ಭಾವಚಿತ್ರ ಹಾಗೂ ಇತರೆ ಮಾಹಿತಿಗಳನ್ನು ಪಾಕಿಸ್ತಾನ ಹಂಚಿಕೊಂಡಿತ್ತು.

ಈ ಮಾಹಿತಿಯನ್ನು ಪರಿಶೀಲನೆ ನಡೆಸಲಾಗಿತ್ತು. ಬಳಿಕ ಇಬ್ಬರೂ ಭಾರತೀಯರೆಂಬುದು ಸಾಬೀತಾಗಿತ್ತು. ಇದರಂತೆ ಪಾಕಿಸ್ತಾನ ಇಬ್ಬರನ್ನೂ ಸೋಮವಾರ ಬಿಎಸ್ಎಫ್’ಗೆ ಹಸ್ತಾಂತರ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಕ್ರಮ ಗಡಿ ದಾಟಿದ ಹಿನ್ನೆಲೆಯಲ್ಲಿ ಈ ವರೆಗೂ ಪಾಕಿಸ್ತಾನದ ಪಡೆಹು 19 ಮಂದಿ ಭಾರತೀಯರನ್ನು ವಿವಿಧ ಭಾಗಗಳಲ್ಲಿ ಬಂಧನಕ್ಕೊಳಪಡಿಸಿದ್ದಾರೆ. ಎಲ್ಲರೂ ವಿವಿಧ ಜೈಲುಗಳಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಸಂಪೂರ್ಣ ತನಿಖಾ ವರದಿ ಬಳಿಕ ಪ್ರಕರಣ ಕುರಿತು ಫೆಡರಲ್ ರಿವ್ಯೂ ಬೋರ್ಡ್ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.