News Kannada
Thursday, October 06 2022

ವಿದೇಶ

ಸಚಿವಾಲಯಕ್ಕೆ ಮಹಿಳಾ ಉದ್ಯೋಗಿಗಳಿಗೆ ಪ್ರವೇಶವಿಲ್ಲ- ತಾಲಿಬಾನ್ - 1 min read

Photo Credit :

ಕಾಬೂಲ್: “ತಾಲಿಬಾನ್‌ ಮಹಿಳಾ ಉದ್ಯೋಗಿಗಳನ್ನು ಕಾಬೂಲ್‌ನ ಮಹಿಳಾ ವ್ಯವಹಾರಗಳ ಸಚಿವಾಲಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದ್ದು, ಕೇವಲ ಪುರುಷ ಉದ್ಯೋಗಿಗಳಿಗೆ ಮಾತ್ರವೇ ಪ್ರವೇಶಕ್ಕೆ ಅನುಮತಿ ನೀಡಿದೆ” ಎಂದು ಸಚಿವಾಲಯ ಹೇಳಿದೆ.
ತಾಲಿಬಾನ್‌‌ನ ಈ ತೀರ್ಮಾನದ ವಿರುದ್ದ ಸಚಿವಾಲಯದ ಬಳಿ ಮಹಿಳೆಯರು ಪ್ರತಿಭಟನೆ ನಡೆಸಿರುವುದಾಗಿ ಹೇಳಿದೆ.”ತಾಲಿಬಾನ್‌ 20 ವರ್ಷಗಳ ನಂತರ ಮತ್ತೆ ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ಬಳಿಕ ಅಫ್ಗಾನ್‌ನಲ್ಲಿ ಮಹಿಳೆಯರು ಈ ಹಿಂದಿನಂತೆ ಭಯದಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ಎದುರಾಗಲಿದೆ” ಎಂದು ತಜ್ಞರು ತಿಳಿಸಿದ್ದಾರೆ.ಸಚಿವಾಲಯದೊಳಕ್ಕೆ ನಾಲ್ವರು ಮಹಿಳಾ ಉದ್ಯೋಗಿಗಳಿಗೆ ಪ್ರವೇಶಿಸಲು ಅನುಮತಿ ನೀಡಿಲ್ಲ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.ತಾಲಿಬಾನ್‌‌ನ ಈ ತೀರ್ಮಾನದ ವಿರುದ್ದ ಸಚಿವಾಲಯದ ಬಳಿ ಮಹಿಳೆಯರು ಪ್ರತಿಭಟನೆ ನಡೆಸಿರುವುದಾಗಿ ಹೇಳಿದೆ.ಈ ಹಿಂದೆ ಅಫ್ಗಾನ್‌ನಲ್ಲಿ ತಾಲಿಬಾನ್‌ ಆಡಳಿತ ನಡೆಸಿದ್ದ ಸಂದರ್ಭ ಶರಿಯಾ ಕಾನೂನು ಜಾರಿಗೊಳಿಸಿದ್ದು, ಬಹಿರಂಗವಾಗಿ ಕಲ್ಲು ಹೊಡೆದು ಕೊಲ್ಲುವುದು, ಸಾರ್ವಜನಿಕ ಮರಣದಂಡನೆ ಘಟನೆ ನಡೆಸಿರುವುದನ್ನು ಇಂದಿಗೂ ಅಫ್ಗಾನ್‌ನ ಜನರು ನೆನೆಸಿಕೊಳ್ಳುತ್ತಾರೆ.

ಅಮೇರಿಕಾ ನೇತೃತ್ವದ ಮೈತ್ರಿ ಪಡೆ ಅಫ್ಗಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ತಾಲಿಬಾನ್‌ ಅಸ್ತಿತ್ವ ಕಳೆದುಕೊಂಡಿತ್ತು. ಅಮೇರಿಕಾದ ನೂತನ ಅಧ್ಯಕ್ಷ ಜೊ ಬಿಡೆನ್‌ ಅವರು ಅಫ್ಗಾನಿಸ್ತಾನದಲ್ಲಿದ್ದ ಅಮೇರಿಕಾ ಸೇನಾ ಪಡೆಯನ್ನು ವಾಪಾಸ್ಸು ಕರೆಸಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಅಮೇರಿಕಾ ಸೇನಾ ಪಡೆ ಅಫ್ಗಾನಿಸ್ತಾನದಿಂದ ವಾಪಾಸ್ಸಾಗುತ್ತಿದ್ದಂತೆಯೇ ತಾಲಿಬಾನ್‌‌ ಅಫ್ಗಾನ್‌ ಆಡಳಿತವನ್ನು ತನ್ನ ಕೈವಶ ಮಾಡಿಕೊಂಡಿತ್ತು.

See also  ಅಘಾನಿಸ್ತಾನದಲ್ಲಿ ವಾಯುಸೇನೆ ದಾಳಿ– 200ಕ್ಕೂ ಅಧಿಕ ಉಗ್ರರ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು