NewsKarnataka
Wednesday, November 24 2021

ವಿದೇಶ

ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‌ಗೆ ಸೋಂಕು: ಐಸಿಯುಗೆ ದಾಖಲು

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ಕ್ಯಾಲಿಫೋರ್ನಿಯಾದ ಆಸ್ಪತ್ರೆಗೆ ಗುರುವಾರ ದಾಖಲಿಸಲಾಗಿದೆ. 75 ವರ್ಷದ ಕ್ಲಿಂಟನ್ ಅವರಲ್ಲಿ ರಕ್ತ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಕ್ಲಿಂಟನ್ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಮುಖ್ಯವಾಗಿ ಅವರಿಗೆ ಖಾಸಗಿತನ ಮತ್ತು ವಿಶ್ರಾಂತಿ ಅಗತ್ಯವಿದೆ. ಅವರಿಗೆ ಉಸಿರಾಟದ ಸಾಧನ ಅಳವಡಿಸಿಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ಕ್ಯಾಲಿಫೋರ್ನಿಯಾದ ಕ್ಯಾಲಿಫೋರ್ನಿಯಾ ಇರ್ವೈನ್ ವೈದ್ಯಕೀಯ ಕೇಂದ್ರದ ವೈದ್ಯರು ತಿಳಿಸಿದ್ದಾರೆ. ಅವರ ಅನಾರೋಗ್ಯವು ಈ ಹಿಂದೆ ಅವರಲ್ಲಿ ಕಾಣಿಸಿಕೊಂಡಿದ್ದ ಹೃದ್ರೋಗ ಸಮಸ್ಯೆ ಅಥವಾ ಕೋವಿಡ್ 19ಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೂತ್ರಕೋಶ ಸೋಂಕು ಅವರ ರಕ್ತದ ಹರಿವಿನೊಂದಿಗೆ ಹರಡಿಕೊಂಡಿದೆ. ಅವರನ್ನು ಐಸಿಯುದಲ್ಲಿ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಕ್ಲಿಂಟನ್ ಅವರು ಚೇತರಿಸಿಕೊಳ್ಳುತ್ತಿದ್ದು, ಉತ್ತಮ ಉತ್ಸಾಹದಲ್ಲಿದ್ದಾರೆ. ಕುಟುಂಬ ಹಾಗೂ ಸಿಬ್ಬಂದಿ ಜತೆ ಮಾತನಾಡುತ್ತಿದ್ದಾರೆ. ಆಗಾಗ್ಗೆ ಎದ್ದು ಓಡಾಡುತ್ತಾರೆ. ಎರಡು ದಿನಗಳ ಚಿಕಿತ್ಸೆ ಬಳಿಕ ಅವರ ಬಿಳಿ ರಕ್ತ ಕಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆಂಟಿಬಯಾಟಿಕ್‌ಗೆ ಅವರು ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಅವರು ಮನೆಗೆ ಮರಳಬಹುದು ಎಂಬ ಭರವಸೆ ಇದೆ ಎಂದು ವೈದ್ಯರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!