News Kannada
Sunday, October 02 2022

ವಿದೇಶ

53 ದೇಶಗಳಲ್ಲಿ ಕೋವಿಡ್ ಹೊಸ ಅಲೆ - 1 min read

Photo Credit :

ಡೆನ್ಮಾರ್ಕ್ :ಸಾಂಕ್ರಾಮಿಕ ದಟ್ಟವಾಗಿ ಹರಡುವ ಇನ್ನೊಂದು ನಿರ್ಣಾಯಕ ಹಂತದಲ್ಲಿ ನಾವಿದ್ದೇವೆ. ಯೂರೋಪ್ ಈಗಾಗಲೇ ಒಂದು ವರ್ಷ ಹಿಂದೆ ಇದ್ದಂತೆ ಸಾಂಕ್ರಾಮಿಕದ ಕೇಂದ್ರಸ್ಥಾನವಾಗಿ ಮಾರ್ಪಟ್ಟಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪ್ ಮುಖ್ಯಸ್ಥ ಹನ್ಸ್ ಕ್ಲೂಗ್ ಹೇಳಿದ್ದಾರೆ.

ಯೂರೋಪ್ ಮತ್ತು ಕೇಂದ್ರ ಏಷ್ಯಾದ 53 ದೇಶಗಳಲ್ಲಿ ಮುಂದಿನ ಕೆಲ ವಾರಗಳಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಹೊಸ ಅಲೆ ವ್ಯಾಪಿಸುವ ಅಪಾಯ ಇದ್ದು, ಇದು ಈ ದೇಶಗಳ ಪಾಲಿಗೆ ನೈಜ ಅಪಾಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.ಈ ಪೈಕಿ ಕೆಲ ದೇಶಗಳು ಈಗಾಗಲೇ ಹೆಚ್ಚು ಹರಡುವ ಸಾಮರ್ಥ್ಯವಿರುವ ಡೆಲ್ಟಾ ಪ್ರಬೇಧದ ಹೊಸ ಅಲೆಯ ವಿರುದ್ಧ ಹೋರಾಡುತ್ತಿವೆ ಎಂದು ಹೇಳಿದೆ.

“ಹೊಸ ಪ್ರಕರಣಗಳು ಮತ್ತು ಬೆಳವಣಿಗೆ ವೇಗ ಮತ್ತೆ ದಾಖಲೆ ಮಟ್ಟ ತಲುಪಲು ಆರಂಭವಾಗಿವೆ. ಪೌರಾತ್ಯ ಪ್ರದೇಶವಾದ ಹಿಂದಿನ ಸೋವಿಯತ್ ಒಕ್ಕೂಟದಿಂದ ಕೇಂದ್ರ ಏಷ್ಯಾವರೆಗಿನ ಪ್ರದೇಶ ತೀರಾ ಕಳವಳಕಾರಿ” ಎಂದು ಅವರು ಬಣ್ಣಿಸಿದ್ದಾರೆ.

ಸಾವು ಮತ್ತು ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯೂರೋಪಿಯನ್ ದೇಶಗಳು ಮತ್ತಷ್ಟು ಹರಡುವಿಕೆ ತಡೆಯಲು ಕಠಿಣ ಪರಿಶ್ರಮ ವಹಿಸಬೇಕಿದೆ. ಈ ಹಿಂದಿನ ಪರಿಸ್ಥಿತಿಗೆ ಮತ್ತು ಈಗಕ್ಕೆ ಇರುವ ವ್ಯತ್ಯಾಸವೆಂದರೆ, ಆರೋಗ್ಯ ಅಧಿಕಾರಿಗಳು ಈಗ ವೈರಸ್ ಬಗ್ಗೆ ಮತ್ತು ಅದನ್ನು ನಿಭಾಯಿಸುವ ಸಾಧನಗಳ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾರೆ. ಕೆಲ ಪ್ರದೇಶಗಳಲ್ಲಿ ತಡೆ ಕ್ರಮಗಳನ್ನು ಸಡಿಲಿಸಿದ್ದು ಮತ್ತು ಲಸಿಕೆ ಪ್ರಮಾಣ ಏರಿಕೆಯ ಮೂಲಕ ಪ್ರಕಟವಾಗಿದೆ” ಎಂದು ಹೇಳಿದ್ದಾರೆ.

ಯೂರೋಪ್ ಪ್ರದೇಶದಲ್ಲಿ ಒಂದು ವಾರದಲ್ಲಿ ಸುಮಾರು 18 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 6ರಷ್ಟು ಏರಿಕೆಯಾಗಿದ್ದು, ಸಾವಿನ ಸಂಖ್ಯೆ 24 ಸಾವಿರ ದಾಟಿದೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇಕಡ 12ರಷ್ಟು ಅಧಿಕ.

See also  ರಷ್ಯಾ ದಾಳಿಗೆ ಉಕ್ರೇನ್‌ ನಲ್ಲಿ ಈವರೆಗೆ 7 ಮಂದಿ ಸಾವು, 9 ಜನರಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು