News Kannada
Friday, October 07 2022

ವಿದೇಶ

ಅಮೆರಿಕದ ಮಿಷಿಗನ್‌, ಮಿನ್ನೆಸೋಟಾದಲ್ಲಿ ಕೋವಿಡ್‌-19 ಪ್ರಕರಣ ಹೆಚ್ಚಳ - 1 min read

Photo Credit :

ಮಿಷಿಗನ್‌: ಅಮೆರಿಕದ ಮಿಷಿಗನ್‌ ಮತ್ತು ಮಿನ್ನೆಸೋಟಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ.ವಾರದಲ್ಲಿ ಮಿಷಿಗನ್‌ ಆಸ್ಪತ್ರೆಗಳಲ್ಲಿ ಕೋವಿಡ್‌-19ರ 3 ಸಾವಿರಕ್ಕೂ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ ಅಲ್ಲಿನ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದು, ಹಾಸಿಗೆಗಳು ಭರ್ತಿಯಾಗಿವೆ.ಮಿನ್ನೆಸೊಟಾದ ಬಹುತೇಕ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಭರ್ತಿಯಾಗಿದ್ದಾರೆ. ಅಮೆರಿಕದಲ್ಲಿನ ಈ ಎರಡೂ ರಾಜ್ಯಗಳು ಕೋವಿಡ್‌ ಹಾಟ್‌ಸ್ಪಾಟ್‌ಗಳಾಗಿ ಪರಿವರ್ತನೆಯಾಗಿವೆ.

‘ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ದಾಖಲಾಗುತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆ’ ಎಂದು ‘ಡೆಟ್ರಾಯಿಟ್‌ನ ಹೆನ್ರಿ ಫೋರ್ಡ್ ಹೆಲ್ತ್ ಸಿಸ್ಟಮ್‌’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಬ್ ರಿನಿ ಹೇಳಿದ್ದಾರೆ.

ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ದೇಶದ ದಕ್ಷಿಣ ಭಾಗದಲ್ಲಿ ಸೋಂಕು ದೃಢ ಪ್ರಮಾಣವೂ ಕಡಿಮೆಯಾಗಿದ್ದು, ಮಾಸ್ಕ್‌ ಹಾಕಿಕೊಳ್ಳುವ ನಿರ್ಬಂಧಗಳನ್ನು ಕೆಲವೆಡೆ ತೆರವುಮಾಡಲಾಗಿದೆ. ಆದರೆ ಈಶಾನ್ಯ ಮತ್ತು ಮಧ್ಯ ಪಶ್ಚಿಮ ಭಾಗದ ಮೇಲ್ಭಾಗದಲ್ಲಿ ಸೋಂಕು ತೀವ್ರವಾಗುತ್ತಿದೆ.

See also  ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್ :‌ 202 ಶಾಲೆಗಳು, 1500 ಮನೆಗಳು ಧ್ವಂಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು