News Kannada
Wednesday, March 22 2023

ವಿದೇಶ

ಉತ್ತರ ಕೊರಿಯಾದ ಜನತೆಗೆ ಲೆದರ್​ ಕೋಟ್​​ ಬಳಕೆ ನಿರ್ಬಂಧ

Photo Credit :

ಉತ್ತರ ಕೊರಿಯಾದಲ್ಲಿ ಕಿಮ್​ಜಾಂಗ್​ಉನ್​​ರ ಸರ್ವಾಧಿಕಾರತ್ವ ಹೇಗೆ ಇರುತ್ತೆ ಅನ್ನೋದರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಮಾಹಿತಿ ಇದೆ. ಇದೇ ಸರ್ವಾಧಿಕಾರದ ಮುಂದುವರಿದ ಭಾಗವಾಗಿ ಉತ್ತರ ಕೋರಿಯಾ ಜನತೆಗೆ ಲೆದರ್​ ಕೋಟ್​​ಗಳ ಬಳಕೆಗೆ ನಿರ್ಬಂಧ ಹೇರಲಾಗಿದೆಯಂತೆ..!

ಅರೆ..! ಲೆದರ್​ ಕೋಟ್​ ಧರಿಸೋದಕ್ಕೆ ಏಕೆ ನಿರ್ಬಂಧ ಹೇರಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಕಿಮ್​ ಜಾಂಗ್​ ಉನ್ ಈ ರೀತಿಯ ವಿಚಿತ್ರ ಆದೇಶವನ್ನು ಹೊರಡಿಸುತ್ತಿರೋದು ಇದೇ ಮೊದಲೇನಲ್ಲ. ಸಾಕಷ್ಟು ಬಾರಿ ಈ ರೀತಿಯ ಅರ್ಥವೇ ಇಲ್ಲದ ಆದೇಶಗಳನ್ನು ಕಿಮ್​ ಜಾಂಗ್​ ಹೊರಡಿಸಿದ್ದಾರೆ. ಈ ಬಾರಿ ತನ್ನ ಸ್ಟೈಲ್​​ನ್ನು ಯಾರು ಕಾಪಿ ಮಾಡಬಾರದು ಎಂಬ ಕಾರಣಕ್ಕೆ ಈ ಆದೇಶವನ್ನು ಹೊರಡಿಸಿದ್ದಾರಂತೆ..!

2019ರಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​​ ಉನ್​ ಮೊದಲ ಬಾರಿಗೆ ಟ್ರೆಂಚ್​​ ಲೆದರ್​ ಕೋಟ್​ನ್ನು ಧರಿಸಿದ್ದರು. ಇದಾದ ಬಳಿಕ ಸಾರ್ವಜನಿಕ ವಲಯದಲ್ಲಿಯೂ ಈ ಕೋಟ್​​​ ಭಾರೀ ಜನಪ್ರಿಯವಾಯ್ತು. ಚೀನಾದಿಂದ ಆರ್ಡರ್​ ಮಾಡಿ ತರಿಸಿ ಈ ಕೋಟ್​ಗಳನ್ನು ಜನರು ಧರಿಸುತ್ತಿದ್ದರು. ಆದರೆ ಕಿಮ್​ಜಾಂಗ್​ ಉನ್​ ಧರಿಸಿದಂತೆ ಜಾಕೆಟ್​ಗಳನ್ನೇ ಧರಿಸುವ ಮೂಲಕ ಜನರು ತನಗೆ ಅವಮಾನ ಮಾಡುತ್ತಿದ್ದಾರೆ ಎಂದು ಕಿಮ್​ಜಾಂಗ್​ ಸಾರ್ವಜನಿಕರು ಈ ಕೋಟ್​ ಧರಿಸದಂತೆ ನಿಷೇಧ ಹೇರಿದ್ದಾರೆ.

ಹಿಂದೊಮ್ಮೆ ಕಿಮ್​ ಜಾಂಗ್​​ ಉನ್​ರ ಸಹೋದರಿ ಕೂಡ ಈ ಟ್ರೆಂಚ್​ ಕೋಟ್​ ಧರಿಸಿದ್ದರು. ಇದಾದ ಬಳಿಕ ಮಹಿಳೆಯರೂ ಕೂಡ ಟ್ರೆಂಚ್​ ಕೋಟ್​ ಧರಿಸಲು ಆರಂಭಿಸಿದ್ದರು. ಇದು ಮಾತ್ರವಲ್ಲದೇ ಈ ವರ್ಷದ 8ನೇ ಪಕ್ಷದ ಕಾಂಗ್ರೆಸ್​ ಮಿಲಿಟರಿ ಪರೇಡ್​ನಲ್ಲೂ ಸಹ ಹಿರಿಯ ಅಧಿಕಾರಿಗಳು ಟ್ರೆಂಚ್​ ಕೋಟ್ ಧರಿಸಿದ್ದರು. ಉತ್ತರ ಕೊರಿಯಾದಲ್ಲಿ ಟ್ರೆಂಚ್​ಕೋಟ್​​ಗೆ ಬೆಲೆ ಎಷ್ಟಿದೆ ಅಂದರೆ ಇದನ್ನು ಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತೆ.

ಖಾಸಗಿ ಬಟ್ಟೆ ವ್ಯಾಪಾರಿಗಳು ಕೃತಕ ಚರ್ಮವನ್ನು ಆಮದು ಮಾಡಿಕೊಂಡು ಈ ರೀತಿಯ ಕೋಟ್​ಗಳನ್ನು ತಯಾರಿಸಿ ಮಾರುತ್ತಿದ್ದರು. ಆದರೆ ಈಗ ಕಿಮ್​ ಜಾಂಗ್​ ಉನ್​ ಆದೇಶದ ಬಳಿಕ ಅಂಗಡಿಗಳಿಗೆ ತೆರಳಿರುವ ಪೊಲೀಸರು ಇಂತಹ ಕೋಟ್​ಗಳನ್ನು ಜಪ್ತಿ ಮಾಡುತ್ತಿದ್ದಾರೆ.

See also  ಪಾಕಿಸ್ತಾನ : ಕರಾಚಿಯಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ದಾಖಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು