ವಾಷಿಂಗ್ಟನ್ : ಅಮೆರಿಕದ ಆಕ್ಸ್‌ಫರ್ಡ್ ಟೌನ್‌ಶಿಪ್‌ನ ಮಿಚಿಗನ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಬುಧವಾರದಂದು ಸಹಪಾಠಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅದರ ಪರಿಣಾಮ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, 8 ವಿದ್ಯಾರ್ಥಿಗಳು ಗಾಯಾಳುಗಳಾಗಿದ್ದಾರೆ.
16 ವರ್ಷದ ಯುವಕನ ತಂದೆ ಶುಕ್ರವಾರದಂದು ತಮಗೆಂದು ಬಂದೂಕೊಂದನ್ನು ಖರೀದಿಸಿಕೊಂಡು ಬಂದಿದ್ದರು. ಅದರೊಂದಿಗೆ ಯುವಕ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಅದನ್ನು ಬುಧವಾರ ಶಾಲೆಗೆ ತಂದಿದ್ದು, ಸಹಪಾಠಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಈ ದಾಳಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಯುವಕನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.