ಸೌದಿ ಅರೇಬಿಯಾ : ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಪ್ರಾಣಿಗಳ ವಾರ್ಷಿಕ ಸೌಂದರ್ಯ ಸ್ಪರ್ಧೆಯಿಂದ 40ಕ್ಕೂ ಹೆಚ್ಚು ಒಂಟೆಗಳನ್ನ ಅನರ್ಹಗೊಳಿಸಲಾಗಿದೆ. ಈ ಕಿಂಗ್ ಅಬ್ದುಲ್ ಅಜೀಜ್ ಕ್ಯಾಮೆಲ್ ಫೆಸ್ಟಿವಲ್ʼನಲ್ಲಿ ಸ್ವರ್ಧಿಸಿದ 27 ಒಂಟೆಗಳ ದೇಹದ ಭಾಗಗಳನ್ನ ಹಿಗ್ಗಿಸಿದ್ರೆ, ಇನ್ನು 16 ಒಂಟೆಗಳಿಗೆ ಬೊಟೊಕ್ಸ್ ಚುಚ್ಚುಮದ್ದು ನೀಡಲಾಗಿದೆ ಎನ್ನುವ ಕಾರಣ ನೀಡಿದ ಸಂಘಟಕರು, ಸ್ಪರ್ಧೆಯಿಂದ ಒಂಟೆಗಳನ್ನ ಆನರ್ಹಗೊಳಿಸಿದ್ದಾರೆ ಎಂದು ರಾಜ್ಯ ಸರ್ಕಾರ ನಡೆಸುತ್ತಿರುವ ಸೌದಿ ಪ್ರೆಸ್ ಏಜೆನ್ಸಿ (SPA) ತಿಳಿಸಿದೆ.
ಸೌದಿ ರಾಜಧಾನಿ ರಿಯಾದ್ʼನಲ್ಲಿ ಡಿಸೆಂಬರ್ 1ರಂದು ಪ್ರಾರಂಭವಾದ 40 ದಿನಗಳ ಈ ಉತ್ಸವದಲ್ಲಿ ವಿಜೇತ ಒಂಟೆಗಳಿಗೆ 66 ಮಿಲಿಯನ್ ಡಾಲರ್ ಬಹುಮಾನದ ಹಣ ನೀಡಲಾಗುತ್ತೆ. ಒಂಟೆಗಳಲ್ಲಿನ ಎಲ್ಲಾ ಆರು ಪ್ರಾಥಮಿಕ ಬಣ್ಣಗಳಿಗಾಗಿ 19 ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತೆ.
ಬೊಟೊಕ್ಸ್ ಚುಚ್ಚುಮದ್ದುಗಳು, ಫೇಸ್ ಲಿಫ್ಟ್ ಮತ್ತು ಇತರ ಸೌಂದರ್ಯವರ್ಧಕ ವರ್ಧನೆಗಳ ಮೇಲಿನ ದಬ್ಬಾಳಿಕೆಯನ್ನ ‘ವಿಶೇಷ ಮತ್ತು ಸುಧಾರಿತ’ ತಂತ್ರಜ್ಞಾನದ ಬಳಕೆಯೊಂದಿಗೆ ತೀವ್ರಗೊಳಿಸಲಾಗಿದೆ. ಅಂದ್ಹಾಗೆ, ಇಲ್ಲಿ ಜ್ಯೂರಿಗಳು ಒಂಟೆಗಳ ತಲೆ, ಕುತ್ತಿಗೆ, ಹಂಪ್, ಉಡುಗೆ ಮತ್ತು ಭಂಗಿಗಳ ಆಕಾರದ ಆಧಾರದ ಮೇಲೆ ವಿಜೇತ ಒಂಟೆಗಳನ್ನ ನಿರ್ಧರಿಸುತ್ತಾರೆ.