ಫುಡ್ ಡೆಲಿವರಿ ಕ್ಷೇತ್ರದ ಇತಿಹಾಸದ ಅತಿ ದೊಡ್ಡ ಅಧ್ಯಾಯವೊಂದರಲ್ಲಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಮಂದಿಗೆ ಊಬರ್ ಈಟ್ಸ್ ಆಹಾರ ತಲುಪಿಸಿದೆ.
ಈ ವಿಶಿಷ್ಟ ಸಾಧನೆಯನ್ನು ಜಪಾನ್‌ನ ಶತಕೋಟ್ಯಾಧೀಶ ಯುಶಾಕು ಮಯೆಜ಼ಾವಾ ಗಗನಯಾನಿಗಳಿಗೆ ಖುದ್ದಾಗಿ ಫುಡ್ ಪಾರ್ಸೆಲ್‌ಗಳನ್ನು ಐಎಸ್‌ಎಸ್ ತಲುಪಿಸಿದ್ದಾರೆ.
ಡಿಸೆಂಬರ್ 11ರಂದು ಒಂಬತ್ತು ಗಂಟೆಗಳ ಕಾಲ ರಾಕೆಟ್‌ನಲ್ಲಿ ಪಯಣಿಸಿದ ಮಯೆಜ಼ೆವಾ ಐಎಸ್‌ಎಸ್ ತಲುಪಿದ್ದಾರೆ. ತಿನ್ನಲು ಸಿದ್ಧವಿರುವ ಖಾದ್ಯಗಳಿದ್ದ ಕ್ಯಾನ್‌ಗಳಿರುವ ಊಬರ್ ಈಟ್ಸ್ ಬ್ಯಾಗ್ ಒಂದನ್ನು ಯುಶಾಕು ತಮ್ಮೊಂದಿಗೆ ಈ ವೇಳೆ ಕೊಂಡೊಯ್ದಿದ್ದಾರೆ. ಇನ್ನೂ 12 ದಿನಗಳ ಕಾಲ ಅವರು ಐಎಸ್‌ಎಸ್‌ನಲ್ಲಿ ವಾಸ್ತವ್ಯವಿರಲಿದ್ದಾರೆ.
ಟ್ವಿಟರ್‌ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ, ಗಗನನೌಕೆಯ ಬಾಗಿಲನ್ನು ತೆರೆದ ಶತಕೋಟ್ಯಾಧೀಶ ಶೂನ್ಯ-ಗುರುತ್ವಾಕರ್ಷಣಾ ಸುರಂಗದಲ್ಲಿ ಹಾರುತ್ತಾ ಆಹಾರದ ಪ್ಯಾಕೇಜ್‌ಅನ್ನು ತಲುಪಿಸಿದ್ದಾರೆ.