ಮ್ಯಾನ್ಮಾರ್: ದಿಢೀರ್ ಭೂಕುಸಿತದ ಕಾರಣದಿಂದಾಗಿ ಓರ್ವ ಮೃತಪಟ್ಟು, 100ಕ್ಕೂ ಹೆಚ್ಚು ಜನರು ಮ್ಯಾನ್ಮಾರ್ ನಲ್ಲಿ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.
ಮ್ಯಾನ್ಮಾರ್ ಜೇಡ್ ಗಣಿಯಲ್ಲಿ ಭೂಕುಸಿತದ ನಂತರ ಕನಿಷ್ಠ 70 ಜನರು ಕಾಣೆಯಾಗಿದ್ದಾರೆ ಎಂದು ರಕ್ಷಣಾ ತಂಡವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್ ಪಿ ವರದಿ ಮಾಡಿದೆ.
ಕಾಚಿನ್ ರಾಜ್ಯದ ಹಪಾಕಾಂತ್ ಗಣಿಯಲ್ಲಿ ಮುಂಜಾನೆ 4 ಗಂಟೆಯ ಸುಮಾರಿಗೆ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 70 ರಿಂದ 100 ಜನರು ಕಾಣೆಯಾಗಿದ್ದಾರೆ ಎಂದು ರಕ್ಷಣಾ ತಂಡದ ಸದಸ್ಯ ಕೋ ನೈ ತಿಳಿಸಿದ್ದಾರೆ.